
ದಾವಣಗೆರೆ,ಏ.13- ಯುವತಿಯನ್ನು ಪ್ರೀತಿಸಿ ಮದುವೆಯಾಗಲು ನಿರಾಕರಿಸಿ ಪರಾರಿಯಾಗಲು ಯತ್ನಿಸಿದ್ದ ಕಾನ್ಸ್ಟೇಬಲ್ನನ್ನು ಪೊಲೀಸರೇ ಕರೆತಂದು ಹರಿಹರದ ಹರಿಹರಲಿಂಗೇಶ್ವರ ದೇವಸ್ಥಾನದಲ್ಲಿ ವಿವಾಹ ಮಾಡಿಸಿದ ಪ್ರಸಂಗ ನಡೆದಿದೆ.
ಶಿವಮೊಗ್ಗ ಜಿಲ್ಲೆ ಕುಂಸಿ ಪೊಲೀಸ್ ಠಾಣೆಯಲ್ಲಿ ಮಂಜುನಾಥ್ ಕಾರ್ಯ ನಿರ್ವಹಿಸತ್ತಿದ್ದಾರೆ. ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಹರಪ್ಪನಹಳ್ಳಿಯ ನಿವಾಸಿ ಮಂಜುಳ ಹಾಗೂ ಮಂಜುನಾಥ್ ನಡುವೆ ಸ್ನೇಹ ಬೆಳೆದಿದೆ. ಸ್ನೇಹ ಪ್ರೀತಿಗೆ ತಿರುಗಿದೆ.
ತದನಂತರ ಮಂಜುನಾಥನನ್ನು ವಿವಾಹವಾಗುವಂತೆ ಮಂಜುಳಾ ಕೇಳಿದಾಗ ಏನೋ ಸಬೂಬ ಹೇಳಿ ಜಾರಿಕೊಂಡಿದ್ದನು. ಕಳೆದ ಎಂಟು ತಿಂಗಳಿನಿಂದ ಈಕೆ ಕೈಗೆ ಸಿಗದೆ ಓಡಾಡಿಕೊಂಡಿದ್ದನು.
ಈತನ ವರ್ತನೆಯಿಂದ ಬೇಸರಗೊಂಡ ಮಂಜುಳ ನ್ಯಾಯಕ್ಕಾಗಿ ಹರಪ್ಪನ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ಹರಪ್ಪನ ಠಾಣೆ ಪೆÇಲೀಸರು ಮಂಜುನಾಥ್ನನ್ನು ಇಂದು ಬೆಳಗ್ಗೆ ಕರೆತಂದು ಏಕತಾ ವೇದಿಕೆ ಕಾರ್ಯಕರ್ತರ ಸಹಾಯದೊಂದಿಗೆ ಹರಿಹರಲಿಂಗೇಶ್ವರ ದೇವಾಲಯದಲ್ಲಿ ಮಂಜುಳಾ ಜೊತೆ ವಿವಾಹ ಮಾಡಿಸಿದ್ದಾರೆ.