ರಾಜ್ಯದ 18 ಜಿಲ್ಲೆಗಳಿಗೆ ದ್ವಾರವಾಗಿರುವ ತುಮಕೂರಿನಲ್ಲಿ ಚುನಾವಣೆ ಅಕ್ರಮಗಳ ಬಗ್ಗೆ ಹದ್ದಿನಕಣ್ಣಿಡಲು ನೀಲಮಣಿರಾಜು ಸೂಚನೆ:

ತುಮಕೂರು, ಏ.13- ರಾಜ್ಯದ 18 ಜಿಲ್ಲೆಗಳಿಗೆ ದ್ವಾರವಾಗಿರುವ ತುಮಕೂರಿನಲ್ಲಿ ಚುನಾವಣೆ ಅಕ್ರಮಗಳ ಬಗ್ಗೆ ಹದ್ದಿನ ಕಣ್ಣಿಡುವಂತೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಅಧಿಕಾರಿಗಳಿಗೆ ಪೆÇಲೀಸ್ ಮಹಾನಿರ್ದೇಶಕರಾದ ನೀಲಮಣಿರಾಜ್ ಸೂಚಿಸಿದ್ದಾರೆ.
ಡಿಜಿ, ಎಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ತುಮಕೂರಿಗೆ ಭೇಟಿ ನೀಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ಪೆÇಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬೆಂಗಳೂರಿಗೆ ಸಮೀಪವಿರುವ ಈ ನಗರ ಮಹಾರಾಷ್ಟ್ರ, ಗೋವಾ, ಆಂಧ್ರ, ದೆಹಲಿಗೆ ಹೋಗುವ ರಸ್ತೆಗಳ ಸಂಪರ್ಕ ಹೊಂದಿದೆ. ಬೆಳಗಾಂ ನಂತರದ 2ನೆ ಅತಿದೊಡ್ಡ ಜಿಲ್ಲೆಯೂ ಆಗಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳನ್ನು ಹೊಂದಿದೆ. ಹಾಗಾಗಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಹದ್ದಿನ ಕಣ್ಣಿಡುವಂತೆ ಆದೇಶಿಸಿದ್ದಾರೆ.
ಜಿಲ್ಲೆಯ ಯಾವುದೇ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದ್ದರೆ, ತಕ್ಷಣ ಅಂತಹ ಠಾಣೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಜಿಲ್ಲೆಯ ಎಲ್ಲ ಡಿವೈಎಸ್‍ಪಿಗಳಿಗೆ ಚುನಾವಣೆ ಅಕ್ರಮ ನಡೆಯದಂತೆ ಹದ್ದಿನ ಕಣ್ಣಿಡಲು ನೀಲಮಣಿರಾಜು ಅವರು ಸೂಚಿಸಿದರು.
ಚುನಾವಣೆಗೆ ಹೆಚ್ಚಿನ ಸಿಬ್ಬಂದಿಯ ಅಗತ್ಯವಿದ್ದರೆ ಕೂಡಲೇ ಲಿಖಿತವಾಗಿ ಮನವಿ ಸಲ್ಲಿಸುವಂತೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಕೇಂದ್ರೀಯ ವಲಯದ ಐಜಿಪಿ ದಯಾನಂದ್, ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಡಿವೈಎಸ್‍ಪಿಗಳಾದ ನಾಗರಾಜ್, ಕಲ್ಲೇಶಪ್ಪ, ಮಹದೇವಪ್ಪ, ವೆಂಕಟೇಶ್‍ನಾಯ್ಡು, ವೆಂಕಟೇಶ್ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ