ಬೆಂಗಳೂರು, ಏ.12- ಕಳೆದ 24 ಗಂಟೆಗಳಲ್ಲಿ ಟ್ರಾಫಿಕ್ ಸರ್ವಲೇನ್ಸ್ ತಂಡ ಮತ್ತು ಫ್ಲೈಯಿಂಗ್ ಸ್ಕ್ವಾಡ್ ಕೋಟ್ಯಂತರ ರೂ. ನಗದು ಹಾಗೂ ವಾಹನಗಳನ್ನು ವಶಕ್ಕೆ ಪಡೆದಿದೆ.
ಸರ್ವಲೇನ್ಸ್ ತಂಡ ಒಟ್ಟು 8,75,11,130ರೂ. ನಗದು, 1,70,80,000ರೂ. ಮೌಲ್ಯದ 7.303 ಕೆಜಿ ಚಿನ್ನ, 11,47,200ರೂ. ಮೌಲ್ಯದ ಬೆಳ್ಳಿ, 54 ಸೀರೆ, ಮದ್ಯ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿವೆ. 1,32,32,772ರೂ ಮೌಲ್ಯದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಫ್ಲೈಯಿಂಗ್ ಸ್ಕ್ವಾಡ್ ಕಳೆದ 24 ಗಂಟೆಯಲ್ಲಿ 54,01000 ನಗದು, 10,190ರೂ. ಮೌಲ್ಯದ 33 ಲೀಟರ್ ಮದ್ಯ, 8 ಲಕ್ಷ ಮೌಲ್ಯದ 10 ವಾಹನ, 2,98,48,000 ಮೌಲ್ಯದ 965 ಚೆಕ್ಗಳು, 190 ಎಲ್ಪಿಜಿ ಸ್ಟೌವ್, 900 ನೋಟ್ಬುಕ್, 52 ಸೀರೆ, 37 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಇದಲ್ಲದೆ ಪೆÇಲೀಸ್ ಪ್ರಾಧಿಕಾರ 7ಲಕ್ಷ ರೂ. ನಗದು, 160 ಲ್ಯಾಪ್ಟಾಪ್, 485 ಲೀಟರ್ ಮದ್ಯ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.