ಕಾಮನ್‌ವೆಲ್ತ್‌ ಗೇಮ್ಸ್‌‌ನಲ್ಲಿ ಮುಂದುವರೆದ ಭಾರತದ ಚಿನ್ನದ ಭೇಟೆ: ಕುಸ್ತಿಪಟು ಸುಶೀಲ್‌ ಕುಮಾರ್‌‌ ಗೆ ಸ್ವರ್ಣ ಪದಕ

ಗೋಲ್ಟ್‌ ಕೋಸ್ಟ್‌: ಏ-೧೨:ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 21ನೇ ಕಾಮನ್‌ವೆಲ್ತ್‌ ಗೇಮ್ಸ್‌‌ನಲ್ಲಿ ಭಾರತದ ಚಿನ್ನದ ಭೇಟೆ ಮುಂದುವರೆದಿದ್ದು,  ಕುಸ್ತಿಪಟು ಸುಶೀಲ್‌ ಕುಮಾರ್‌‌ ಸ್ವರ್ಣ ಪದಕಕ್ಕೆ ಕೊರೊಳೊಡ್ಡಿದ್ದಾರೆ.

74 ಕೆಜಿ ವಿಭಾಗದಲ್ಲಿ ನಡೆದ ಫೈನಲ್‌‌ ಕುಸ್ತಿಯಲ್ಲಿ ಸುಶೀಲ್‌‌ ಕುಮಾರ್‌ ದಕ್ಷಿಣ ಆಫ್ರಿಕಾದ ಕುಸ್ತಿಪಟುವಿನ ವಿರುದ್ಧ ಗೆಲುವು ಸಾಧಿಸಿದ್ದಾರೆ. ಇದಕ್ಕೂ ಮೊದಲು 57ಕೆಜಿ ವಿಭಾಗದ ಕುಸ್ತಿಯಲ್ಲಿ ರಾಹುಲ್‌ ಅವಾರಿ ಚಿನ್ನಕ್ಕೆ ಮುತ್ತಿಕ್ಕಿದರೆ, 76 ಕೆಜಿ ಕುಸ್ತಿ ವಿಭಾಗದಲ್ಲಿ ಭಾರತದ ಕಿರಣ್ ಕಂಚಿನ ಪದಕ ಗೆಲುವಲ್ಲಿ ಯಶಸ್ವಿಯಾಗಿದ್ದಾರೆ. 53 ಕೆಜಿ ವಿಭಾಗದಲ್ಲಿ ಬಬಿತಾ ಕುಮಾರಿ ಬೆಳ್ಳಿಗೆ ಕೊರಳೊಡ್ಡಿದ್ದಾರೆ.

ಈ ಹಿಂದೆ 2010 ಹಾಗೂ 2014ರಲ್ಲಿ ಸುಶೀಲ್‌ ಕುಮಾರ್‌‌ ಚಿನ್ನದ ಪದಕ ಗೆದ್ದುಕೊಂಡಿದ್ದರು. ಇದರೊಂದಿಗೆ ಭಾರತ 8ನೇ ದಿನ 14 ಚಿನ್ನ, ಆರು ಬೆಳ್ಳಿ ಹಾಗೂ 9 ಕಂಚಿನ ಪದಕ ಗೆಲ್ಲುವುದರ ಮೂಲಕ 3ನೇ ಸ್ಥಾನದಲ್ಲಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ