ರೈಲು ತಡವಾಗುವ ಸೂಚನೆ ತಿಳಿಯಲು ಇಟಿಎ ಸೂಚನಾ ಅಲ್ಗೋರಿದಮ್ ಆವಿಷ್ಕರ

ಬೆಂಗಳೂರು, ಏ.12-ಭಾರತದಲ್ಲಿ ಯಂತ್ರ ಕಲಿಕೆಯಿಂದ ರೈಲು ತಡವಾಗುವ ಸೂಚನೆಗಳಲ್ಲಿ ಗಣನೀಯ ಸುಧಾರಣೆ ತಂದಿರುವ ರೈಲ್‍ಯಾತ್ರಿಯು ಒಂದು ವಿಶಿಷ್ಟವಾದ ನವೀನ ಅಂದಾಜು ಬರುವ ಸಮಯ(ಇಟಿಎ)ದ ಸೂಚನಾ ಅಲ್ಗೋರಿದಮ್‍ನ್ನು ಆವಿಷ್ಕರಿಸಿದೆ.
ಇದು ಪ್ರಯಾಣಿಕರಿಗೆ ನಿಲ್ದಾಣಗಳಲ್ಲಿ ದೀರ್ಘಕಾಲ ಕಾಯುವ ಸಮಯವನ್ನು ಕಡಿಮೆ ಮಾಡುತ್ತದೆ. ಓಡುತ್ತಿರುವ ರೈಲುಗಳ ಬರುವಿಕೆ ಸಮಯವನ್ನು ಸೂಚಿಸಲು ಯಂತ್ರಕಲಿಕೆ ಮತ್ತು ಅಂಕಿಂಶ ಮಾದರಿ ತಂತ್ರಗಳನ್ನು ಬಳಸಿ ರೈಲುಗಳ ಮುಂದಿನ ನಿಲುಗಡೆ ನಿಲ್ದಾಣಗಳನ್ನು ಹೆಚ್ಚು ನಿಖರವಾಗಿ ಹೇಳುತ್ತಿದೆ. ಸುರಕ್ಷಾ ಲೆಕ್ಕಾಚಾರವಾಗಿ ರೈಲಿನ ವೇಗವನ್ನು ರೈಲಿನ ಪ್ರಯಾಣದ ದೂರದೊಂದಿಗೆ ವಿಭಾಗಿಸಿ, ಬರುವ ಮೊತ್ತಕ್ಕೆ ಇನ್ನು ಸ್ವಲ್ಪ ಸೇರಿಸಿ ಸೂಚಿಸಲಾಗುತ್ತದೆ.
ಹೆಚ್ಚುತ್ತಿರುವ ಸಂಚಾರ ದಟ್ಟಣೆ, ಋತುಮಾನ ಪ್ರಯಾಣ, ಇತ್ಯಾದಿ ಅಂಶಗಳ ಸರಿಯಾದ ಅಂಶಗಳನ್ನು ಪರಿಗಣಿಸುವುದರಿಂದ ಇದರ ಮೇಲೆ ಆಧಾರಿತವಾದ ಇಟಿಎ ಹೆಚ್ಚು ಉತ್ತಮ ತಂತ್ರವಾಗುತ್ತದೆ ಎಂದು ರೈಲ್ ಯಾತ್ರಿಯ ಸಹ ಸ್ಥಾಪಕಾರದ ಕಪಿಲ್ ರಯ್ಜಾದಾ ಹೇಳುತ್ತಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ