ಬೆಂಗಳೂರು ಏಪ್ರಿಲ್ 11- ಬೆಂಗಳೂರು ನಗರದಲ್ಲಿರುವ ಬಾಲ ಭವನ ಸೊಸೈಟಿ, ಕಬ್ಬನ್ ಪಾರ್ಕ್ ಬೆಂಗಳೂರು ವತಿಯಿಂದ ಕೇಂದ್ರ ಬಾಲಭವನ ಹಾಗೂ ರಾಜಾಜಿನಗರ, ಕೋಲ್ಸ್ ಪಾರ್ಕ್ ಮತ್ತು ಜಯನಗರದಲ್ಲಿರುವ ಮಿನಿ ಬಾಲ ಭವನಗಳಲ್ಲಿ ಏ. 16 ರಿಂದ ಮೇ 13 ರ ವರೆಗೆ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಕರಾಟೆ, ಯೋಗ, ಚಿತ್ರಕಲೆ, ಕರಕುಶ ಕಲೆ, ಜೇಡಿ ಮಣ್ಣಿನ ಕಲೆ, ಗಿಟಾರ್, ತಬಲ, ಕೀಬೋರ್ಡ್, ಸಮೂಹ ನೃತ್ಯ, ಸಮೂಹ ಗೀತೆ, ಜ್ಯೂವೆಲರಿ ಮೇಕಿಂಗ್, ಆರ್ಟ್ ವರ್ಕ್ ವಿತ್ ಮೆಹಂದಿ, ಕಸದಿಂದ ರಸ, ಯಕ್ಷಗಾನ, ಫರ್ ಡಾಲ್, ರೋಬೋಟಿಕ್ಸ್ಎಂಬ್ರಾಯಿಡರಿ, ರಂಗ ತರಬೇತಿಗಳನ್ನು ನೀಡಲಾಗುತ್ತದೆ.
ಅಲ್ಯೂಮಿನಿಯಂ ಫಾಯಿಲ್ ವರ್ಕ್, ಮೆಟಲ್ ಎಂಬೋಸಿಂಗ್/ ಬಾಟಿಕ್ – ಟೈ ಅಂಡ್ ಡೈ ಮತ್ತು ವಿಜ್ಞಾನ ಚಟುವಟಿಕೆಗಳು ಸೇರಿದಂತೆ ಹತ್ತು ಹಲವು ವಿಶೇಷ ಆಕರ್ಷಕ ಚಟುವಟಿಕೆಗಳನ್ನು ಈ ಬೇಸಿಗೇ ಶಿಬಿರದಲ್ಲಿ ಅಳವಡಿಸಿಕೊಂಡಿದ್ದು, 5 ರಿಂದ 16 ವರ್ಷದ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ ಎಂದು ಬಾಲ ಭವನದ ಕಾರ್ಯದರ್ಶಿ ದಿವ್ಯಾ ನಾರಾಯಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿ ಹಾಗೂ ನೊಂದಣಿಗೆ 080-22864189 / 22861423 ಗೆ ಸಂಪರ್ಕಿಸಬಹುದಾಗಿದೆ.