ರಾಯಚೂರು:ಏ-11:ಪಿಡಬ್ಲೂಡಿ ಇಲಾಖೆಯಲ್ಲಿ ಅಧಿಕಾರಿಗಳು ಹಣ ಹಂಚಿಕೆ ಮಾಡಲಾಗುತ್ತಿದೆ ಎನ್ನುವ ದೂರಿನ ಮೇರೆಗೆ ಸಹಾಯಕ ಆಯುಕ್ತ ವೀರಮಲ್ಲಪ್ಪ ದಾಳಿ ನಡೆಸಿದರು.
ನಗರದ ಪಿಡಬ್ಲೂಡಿ ಇಲಾಖೆಯಲ್ಲಿ ಅಧಿಕಾರಿಗಳು ಹಣ ಸಂಗ್ರಹಿಸಿ ಹಂಚಿಕೆ ಮಾಡುತ್ತಿದ್ದಾರೆ ಎಂದು ಆಂಜಿನಯ್ಯ ಎನ್ನುವವರು ದೂರು ನೀಡಿದ್ದು ಸಹಾಯಕ ಆಯುಕ್ತರು ಅಧಿಕಾರಿಗಳ ತಂಡದೊಂದಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ದಾಳಿ ನಡೆಸಿದಾಗ ಕೊನೆ ವೇಳೆಯಲ್ಲಿ ಸುಮಾರು ೨೦ ಸಾವಿರ ರೂ.ಹಣ ಪತ್ತೆಯಾಗಿದೆ.ಹಣವನ್ನು ವಶಪಡಿಸಿಕೊಂಡು ಎಲ್ಲಿಂದ ಬಂತು ಯಾರಿಗೆ ಸೇರಿದ್ದು ಎಂಬ ಕುರಿತು ತನಿಖೆ ನಡೆಸಿದ್ದಾರೆ.
PWD Department,Authorities share money,Assistant Commissioner Veeramallappa,Raid, 20,000 seized