ಗೋಲ್ಡ್ಕೋಸ್ಟ್ , ಏ.11- ಅಭಿನವಬಿಂದ್ರಾ ನಂತರ ಆ ಸ್ಥಾನವನ್ನು ತುಂಬುವ ಲಕ್ಷಣಗಳಿದ್ದ ಗಗನ್ನಾರಂಗ್ ಪದಕ ಗೆಲ್ಲುವಲ್ಲಿ ಎಡವಿದರೂ ಕೂಡ ಭಾರತದ ಶೂಟರ್ಗಳು ಏರ್ಪಿಸ್ತೂಲ್ನಲ್ಲಿ ಪದಕ ಬೇಟೆಯನ್ನು ಮುಂದುವರೆಸಿದ್ದಾರೆ.
ಇಂದು ನಡೆದ 50 ಮೀಟರ್ ಏರ್ಪಿಸ್ತೂಲ್ ಫೈನಲ್ಸ್ನಲ್ಲಿ ಭಾರತದ ಮಿತರ್ವಾಲ್ ಗೆಲ್ಲುವ ಮೂಲಕ ಈ ವಿಭಾಗದಲ್ಲಿ ಮತ್ತೊಂದು ಕಂಚಿನ ಪದಕವನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ.
ಅಂತಿಮ ಘಟಕ್ಕೆ ಭಾರತದ ಮಿತರ್ವಾಲ್ ಹಾಗೂ 10 ಮೀಟರ್ ಏರ್ಪಿಸ್ತೂಲ್ನಲ್ಲಿ ಸ್ವರ್ಣ ಪದಕ ಗೆದ್ದಿದ್ದ ಜೀತುರೈ ಪದಕದ ಆಸೆಯನ್ನು ಚಿಗುರಿಸಿದ್ದರಾದರೂ ಜೀತು ರೈ 6ನೆ ಸ್ಥಾನಕ್ಕೆ ಕುಸಿಯುವ ಮೂಲಕ ನಿರಾಸೆ ಮೂಡಿಸಿದರು.
ತಮ್ಮ ಛಲ ಬಿಡದ ಮಿತರ್ವಾಲ್ ಸ್ಥಳೀಯ ಆಟಗಾರ ಡೆನಿಯಲ್ ಹಾಗೂ ಬಾಂಗ್ಲಾದೇಶದ ಶಕಿಲ್ ಅಹಮದ್ರಿಗೆ ತೀವ್ರ ಸ್ಪರ್ಧೆ ಒಡ್ಡಿದರು.
ಅಂತಿಮವಾಗಿ ಆಸ್ಟ್ರೇಲಿಯಾದ ಡೆನಿಯಲ್ 201.1 ಅಂಕಗಳೊಂದಿಗೆ ಕಾಮನ್ವೆಲ್ತ್ನಲ್ಲಿ ನೂತನ ದಾಖಲೆ ನಿರ್ಮಿಸುವ ಮೂಲಕ ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡರೆ, ಬಾಂಗ್ಲಾದ ಶಕಿಲ್ (220.5) ಬೆಳ್ಳಿ, ಭಾರತದ ಮಿತರ್ವಾಲ್ (201.1) ಕಂಚಿನ ಪದಕವನ್ನು ತಮ್ಮ ಕೊರಳಿಗೇರಿಸಿಕೊಂಡು ಸಂಭ್ರಮಿಸಿದರು.