ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 134 ಅಬಕಾರಿ ಪ್ರಕರಣಗಳು ದಾಖಲು

 

ಬೆಂಗಳೂರು,ಏ.11- ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಜಿಲ್ಲಾ ಅಬಕಾರಿ ಇಲಾಖೆಯು ಕೈಗೊಂಡ ಜಾರಿ ಮತ್ತು ತನಿಖಾ ಕಾರ್ಯದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 134 ಅಬಕಾರಿ ಪ್ರಕರಣಗಳು ದಾಖಲಾಗಿವೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ಇದುವರೆಗೆ 343 ಅಬಕಾರಿ ದಾಳಿ ನಡೆಸಲಾಗಿದ್ದು,ಅದರಲ್ಲಿ ಅಕ್ರಮವಾಗಿ ಮದ್ಯ ಸಾಗಾಣಿಕೆ ಮತ್ತು ಹೊಂದುವಿಕೆಗಾಗಿ 6 ಘೋರ ಪ್ರಕರಣಗಳು, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನಕ್ಕೆ ಅವಕಾಶ ಮಾಡಿದಂತಹ 104 ಪ್ರಕರಣಗಳು ಹಾಗೂ ಅಬಕಾರಿ ಸನ್ನದು ಷರತ್ತು ಉಲ್ಲಂಘನೆಗಾಗಿ 24 ಪ್ರಕರಣಗಳು ಸೇರಿ ಒಟ್ಟು 134 ಅಬಕಾರಿ ಪ್ರಕರಣಗಳು ದಾಖಲಾಗಿವೆ.

134 ಮೊಕದ್ದಮೆಗಳಲ್ಲಿ ಒಟ್ಟು 105 ಲೀಟರ್ ಭಾರತೀಯ ತಯಾರಿಕಾ ಮದ್ಯ ಹಾಗೂ 27 ಲೀಟರ್ ಬೀರ್ ಅನ್ನು ಜಪ್ತಿಪಡಿಸಿಕೊಂಡು, ಅಕ್ರಮ ಮದ್ಯ ಸಾಗಾಣಿಕೆಗೆ ಉಪಯೋಗಿಸಿದ ಎರಡು ದ್ವಿಚಕ್ರ ವಾಹನ ಮತ್ತು ಒಂದು ಆಟೋವನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ 109 ಜನರನ್ನು ದಸ್ತಗಿರಿ ಪಡಿಸಿದೆ. ವಶಪಡಿಸಿಕೊಂಡಿರುವ ಮದ್ಯ ಮತ್ತು ಬೀರ್‍ನ ಒಟ್ಟು ಮೌಲ್ಯ ರೂ.85,103 ಹಾಗೂ ವಾಹನಗಳ ಮೌಲ್ಯ ರೂ. 2,60,000 ಗಳಾಗಿರುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಬಕಾರಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ನೆಲಮಂಗಲ ತಾಲ್ಲೂಕು ಪಂಚಾಯಿತಿ ಸ್ವೀಪ್ ಸಮಿತಿ ವತಿಯಿಂದ ನೆಲಮಂಗಲದ ಅಂಬೇಡ್ಕರ್ ಭವನದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ¾¾ನಿಮ್ಮ ಮತ – ಪ್ರಗತಿಯ ಪಥ¿¿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಲತಾ ಉದ್ಘಾಟಿಸಿದರು.

ಮತದಾನದ ಸಹಿ ಸಂಗ್ರಹ ಅಭಿಯಾನ, ಇ.ವಿ.ಎಮ್ ಹಾಗೂ ವಿ.ವಿ ಪ್ಯಾಟ್ ಪ್ರಾತ್ಯಕ್ಷಿಕೆ, ಬೀದಿ ನಾಟಕ ಪ್ರದರ್ಶನ ಹಾಗೂ ಮತದಾನ ಕುರಿತ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಉಪಕಾರ್ಯದರ್ಶಿ ಕಾಂತರಾಜು, ನೆಲಮಂಗಲ ತಾಲ್ಲೂಕು ತಹಸೀಲ್ದಾರ್, ಕಾರ್ಯನಿರ್ವಣಾಧಿಕಾರಿ, ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಿಡಿಓಗಳು, ಸ್ವ-ಸಹಾಯ ಗುಂಪುಗಳ ಸದಸ್ಯರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ