ಶಿವಮೊಗ್ಗ, ಏ.11- ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಚಾಣದ ಕುಣಿತ ಜೋರಾಗಿದೆ.
ರಾಜ್ಯಾದ್ಯಂತ ಚುನಾವಣಾ ಆಯೋಗ ಹಾಗೂ ಪೆÇಲೀಸರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಚೆಕ್ಪೆÇೀಸ್ಟ್ಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರೂ ಕೆಲವೆಡೆ ರಾಜಾರೋಷವಾಗಿ ನಿಯಮ ಮೀರಿ ಹಣ ಸಾಗಿಸುತ್ತಿದ್ದ ಪ್ರಕರಣಗಳು ದಿನೇ ದಿನೇ ಪತ್ತೆಯಾಗುತ್ತಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಬಿಆರ್ಪಿಯ ಚೆಕ್ಪೆÇೀಸ್ಟ್ನಲ್ಲಿ ನಾಕಾಬಂದಿ ಮಾಡಿ ಪರಿಶೀಲನೆ ನಡೆಸುವಾಗ ಕಾರಿನಲ್ಲಿ ಸಾಗಿಸುತ್ತಿದ್ದಾಗ 62 ಲಕ್ಷ ರೂ. ಪತ್ತೆಯಾಗಿವೆ.
ಚಿಕ್ಕಮಗಳೂರು ಜಿಲ್ಲೆ ಕಡೂರಿನಿಂದ ಎನ್.ಆರ್.ಪುರಕ್ಕೆ ಶಿಫ್ಟ್ ಕಾರಿನಲ್ಲಿ ಈ ಹಣ ಸಾಗಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಕಾರಿನ ಚಾಲಕ ದೀಪಕ್ ಹಾಗೂ ಆತನ ಜತೆಗಿದ್ದ ಪರೇರಾ ಕೃಷ್ಣ ಎಂಬುವರನ್ನು ವಿಚಾರಣೆ ಮಾಡಲಾಗುತ್ತಿದ್ದು , ತಪಾಸಣಾ ತಂಡದ ಅಧಿಕಾರಿ ದಾಸೇಗೌಡ ತಿಳಿಸಿದ್ದಾರೆ.