ಚಿಕ್ಕಬಳ್ಳಾಪುರ , ಏ.11- ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 101ಲೀಟರ್ ಮದ್ಯ ಮತ್ತು 13 ಲೀಟರ್ ಬೀಯರ್ ಜಫ್ತಿ ಮಾಡಲಾಗಿದೆ.
ಅಕ್ರಮವಾಗಿ ಮದ್ಯ ದಾಸ್ತಾನು ಇಟ್ಟಿದ್ದ ಕೌಶಿಕ್‍ನನ್ನು ಬಂಧಿಸಿರುವ ಅಬಕಾರಿ ಇಲಾಖೆ ಉಪ ಆಯುಕ್ತ ಸಿ.ಜಗದೀಶ್ ಅವರು ಆರೋಪಿ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಗೌರಿಬಿದನೂರು ತಾಲ್ಲೂಕಿನ ಉಚ್ಚೋದನಹಳ್ಳಿ ಗ್ರಾಮದ ಕೌಶಿಕ್ ಅವರು ತಮ್ಮ ಮನೆಯಲ್ಲಿ ಅಕ್ರಮ ಮದ್ಯ ದಾಸ್ತಾನು ಮಾಡಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿದ ಅಬಕಾರಿ ಪೆÇಲೀಸರು 36 ಸಾವಿರ ರೂ. ಮೌಲ್ಯದ ಅಕ್ರಮ ಮದ್ಯ ಜಫ್ತಿ ಮಾಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಮತದಾರರ ಓಲೈಕೆಗೆ ಜಿಲ್ಲೆಯಾದಾದ್ಯಂತ ಅಕ್ರಮ ಮದ್ಯ ದಾಸ್ತಾನು ಮಾಡಲಾಗಿದೆ ಎಂಬ ಮಾಹಿತಿಯ ಮೇರೆಗೆ ವಿವಿಧ ಪ್ರದೇಶಗಳಲ್ಲಿ 268ಕ್ಕೂ ಹೆಚ್ಚು ದಾಳಿ ನಡೆಸಿರುವ ಅಬಕಾರಿ ಪೆÇಲೀಸರು ಇದುವರೆಗೂ 105 ಪ್ರಕರಣಗಳನ್ನು ದಾಖಲಿಸಿ 224 ಲೀಟರ್ ಮದ್ಯ, 72 ಲೀಟರ್ ಬಿಯರ್, 114 ಲೀಟರ್ ಸೇಂದಿ , 7 ದ್ವಿಚಕ್ರ, 3 ನಾಲ್ಕು ಚಕ್ರ ವಾಹನಗಳನ್ನು ವಶಪಡಿಸಿಕೊಂಡು 71 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಬಕಾರಿ ದಾಳಿಯಲ್ಲಿ ಒಟ್ಟಾರೆ ವಶಪಡಿಸಿಕೊಂಡಿರುವ ಮದ್ಯ ಹಾಗೂ ವಾಹನದ ಒಟ್ಟು ಮೌಲ್ಯ ಸುಮಾರು 30 ಲಕ್ಷ ಎಂದು ಅಂದಾಜಿಸಲಾಗಿದೆ.