ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರ ವಶ:

ಮೈಸೂರು, ಏ.11-ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರನ್ನು ನಗರದ ಸಿಸಿಬಿ ಮತ್ತು ಹೆಬ್ಬಾಳ ಠಾಣೆ ಪೆÇಲೀಸರು ಬಂಧಿಸಿ 40 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಹೆಬ್ಬಾಳ ಬಡಾವಣೆ ನಿವಾಸಿ ಅಲೋಕ್ ವಾಮನ್ ಕಾಳೆ (38), ರಾಮನ್ ಮೋತಿರಾಮ್ ಕಾಳೆ (60), ನಾಗನಹಳ್ಳಿಯ ಚೇತನ್(27) ಬಂಧಿತ ಆರೋಪಿಗಳು.
ಹೆಬ್ಬಾಳ 2ನೇ ಹಂತದ 2ನೇ ಮುಖ್ಯರಸ್ತೆಯ ಮನೆಯೊಂದರಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಯುತ್ತಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸಿಸಿಬಿ ಪೆÇಲೀಸರು ಮತ್ತು ಹೆಬ್ಬಾಳ ಠಾಣೆ ಪೆÇಲೀಸರು ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ಅಲೋಕ್ ವಾಮನ್ ಕಾಳೆ, ರಾಮನ್ ಮೋತಿ ರಾಮ್ ಕಾಳೆ ಹಾಗೂ ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ಹಣ ತೊಡಗಿಸಲು ಬಂದಿದ್ದ ಚೇತನ್‍ನನ್ನು ಬಂಧಿಸಿದ್ದಾರೆ.
ಬಂಧಿತರಿಂದ 40,45,350 ರೂ. ನಗದು, ಒಂದು ಲ್ಯಾಪ್‍ಟಾಪ್, 6 ಮೊಬೈಲ್, ಒಂದು ಹಣ ಎಣಿಸುವ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.
ಸಿಸಿಬಿ ಇನ್ಸ್‍ಪೆಕ್ಟರ್‍ಗಳಾದ ಶಿವಪ್ರಕಾಶ್, ಕೃಷ್ಣಪ್ಪ, ಶಿವಸ್ವಾಮಿ, ರಾಜಶೇಖರ್, ಮೇಟಗಳ್ಳಿ ಠಾಣೆಯ ರಾಘವೇಂದ್ರಗೌಡ, ಎಎಸ್‍ಐಗಳಾದ ಸುಭಾಷ್‍ಚಂದ್ರ, ರಾಜು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ