
ಮೈಸೂರು,ಏ.10- ಕಳವು ಮಾಡಲು ಬಂದಾಗ ಅಡ್ಡಿಪಡಿಸಿದ್ದ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದ ಮೂವರು ಆರೋಪಿಗಳನ್ನು ನಗರದ ವಿವಿಪುರಂ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಹಾರೋಹಳ್ಳಿಯ ರಾಜಾ(26) ನಗರದ ದೇವರಾಜ ಮೊಹಲ್ಲದ ದಿನೇಶ್(35) ಹಾಗೂ ಗೌಸಿಯಾ ನಗರದ ಎಜೆ ಬ್ಲಾಕ್ನ ಸಲ್ಮಾನ್ ಖಾನ್(20) ಬಂಧಿತ ಆರೋಪಿಗಳು.
ಬಂಧಿತರಿಂದ ಮೊಬೈಲ್ ಫೆÇೀನ್ ಹಾಗೂ ಕಳ್ಳತನ ಮಾಡಿದ್ದ ನಾಲ್ಕು ಕಬ್ಬಿಣದ ಕಿಟಕಿಗಳನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಮಾ.26ರಂದು ವಿಆರ್ಸಿ ವಸತಿ ಗೃಹದ ಬಳಿ ಕಬ್ಬಿಣದ ಕಿಟಕಿಗಳನ್ನು ಕಳವು ಮಾಡಲು ಬಂದಿದ್ದರು.
ಆಗ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭದ್ರತಾ ಸಿಬ್ಬಂದಿ ರಾಜಶೆಟ್ಟಿ ಇವರ ಕಳ್ಳತನಕ್ಕೆ ಅಡ್ಡಿಪಡಿಸಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿಗಳು ದೊಣ್ಣೆಯಿಂದ ಹೊಡೆದು ರಾಜಾಶೆಟ್ಟಿಯನ್ನು ಹತ್ಯೆ ಮಾಡಿ ಆತನ ಬಳಿ ಇದ್ದ ಮೊಬೈಲ್ ಹಾಗೂ ನಾಲ್ಕು ಕಬ್ಬಿಣದ ಕಿಟಕಿಗಳನ್ನು ಕದ್ದು ಪರಾರಿಯಾಗಿದ್ದರು.
ಈ ಬಗ್ಗೆ ವಿವಿಪುರಂ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದರು.
ಆರೋಪಿಗಳು ಕೆಆರ್ಎಸ್ ರಸ್ತೆಯ ನೀಲಗಿರಿ ತೋಪಿನ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಇವರು ರಾಜಾ ಶೆಟ್ಟಿಯನ್ನು ಕೊಲೆ ಮಾಡಿರುವುದು ಗೊತ್ತಾಗಿದೆ.