ಬೆಳ್ಳಂ ಬೆಳಗ್ಗೆ ಸಾರಿಗೆ ಅಧಿಕಾರಿಗಳು ಪರವಾನಗಿ ಮತ್ತಿತರ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ಬಸ್‍ಗಳು ವಶ

ಆನೇಕಲ್, ಏ.10- ಬೆಳ್ಳಂ ಬೆಳಗ್ಗೆ ಸಾರಿಗೆ ಅಧಿಕಾರಿಗಳು ಪರವಾನಗಿ ಮತ್ತಿತರ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ಬಸ್‍ಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರ ಹೊರ ವಲಯದ ಅತ್ತಿಬೆಲೆ ಚೆಕ್‍ಪೆÇೀಸ್ಟ್ ಬಳಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ತೆರೆದಿರುವ ಚೆಕ್‍ಪೆÇೀಸ್ಟ್ ಬಳಿ ಅಂತರರಾಜ್ಯ ವಾಹನಗಳನ್ನು ತಪಾಸಣೆ ನಡೆಸಿದಾಗ ಹಲವು ನಿಯಮಗಳ ಉಲ್ಲಂಘನೆ ಗೊತ್ತಾಗಿದೆ.

ತಮಿಳುನಾಡು , ಆಂಧ್ರಪ್ರದೇಶ ಹಾಗೂ ಪಾಂಡಿಚೇರಿಯಿಂದ ಬಂದಂತಹ ಕೆಲಸ ಖಾಸಗಿ ಬಸ್‍ಗಳ ಮಾಲೀಕರು ತೆರಿಗೆ ಕಟ್ಟದಿರುವುದು ಮತ್ತು ನಂಬರ್ ಪ್ಲೇಟ್‍ನಲ್ಲೂ ಕೂಡ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

ಹಗಲು ವೇಳೆ ಕರ್ನಾಟಕದ ರಿಜಿಸ್ಟೇಷನ್ ನಂಬರ್ ಪ್ಲೇಟ್, ರಾತ್ರಿ ಹೊತ್ತು ನೆರೆ ರಾಜ್ಯಗಳ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡು ಬಸ್‍ಗಳನ್ನು ಓಡಿಸುತ್ತಿರುವುದು ಕೂಡ ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ರೀತಿ ತೆರಿಗೆ ವಂಚನೆ ಕೃತ್ಯ ನಡೆದಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು, ತನಿಖೆ ಮುಂದುವರೆದಿದೆ.

ಜಂಟಿ ಸಾರಿಗೆ ಆಯುಕ್ತರ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ