ಬೆಂಗಳೂರು,ಏ.10- ಚುನಾವಣೆಯ ಮುಗಿಯುವವರೆಗೂ ಯಾವುದೇ ದೇವಾಲಯಗಳು, ಧಾರ್ಮಿಕ ಸ್ಥಳಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕೇಸರಿ ಬಾವುಟಗಳನ್ನು, ಟವಲ್‍ಲುಗಳನ್ನು ಹಾಕುವುದನ್ನು ನಿಷೇಧಿಸಬೇಕೆಂದು ರಾಷ್ಟ್ರೀಯ ಬಹುಸಂಖ್ಯಾತ್ ಸ್ವಯಂ ಸೇವಕ್ ಸಂಘ ಚುನಾವಣಾ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿಯವರು ಸಾರ್ವಜನಿಕವಾಗಿ ನಡೆಸುವ ಪಾದಯಾತ್ರೆಗಳು ಮುಂತಾದ ಬಹಿರಂಗ ಸಭೆ ಸಮಾರಂಭಗಳಲ್ಲಿ ಕೇಸರಿ ಬಾವುಟ, ಕೇಸರಿ ಟವಲುಗಳನ್ನು ಹಾಕಿಕೊಂಡು ಧಾರ್ಮಿಕ ಸ್ಥಳಗಳಲ್ಲಿ ಪೂಜೆ ನೆಪದಲ್ಲಿ ಬಾವುಟಗಳನ್ನು ಹಾಕಿ ಬಿಜೆಪಿ ಲಾಭ ಮಾಡಿಕೊಡುವ ಒಳಸಂಚು ಮಾಡುತ್ತಿದೆ ಎಂದು ಸಂಘದ ರಾಷ್ಟ್ರೀಯ ಅಧ್ಯಕ್ಷ ಜೆ.ಕೃಷ್ಣಪ್ಪ ಆರೋಪಿಸಿದ್ದಾರೆ.
ಚುನಾವಣೆ ಮುಗಿಯುವರೆಗೂ ಸಾರ್ವಜನಿಕ ಸ್ಥಳಗಳಲ್ಲಿ ಕೇಸರಿ ಬಾವಟ, ಟವಲ್‍ಗಳನ್ನು ಹಾಕದಂತೆ ನಿಷೇಧಿಸಬೇಕೆಂದು ಅವರು ಚುನಾವಣಾ ಆಯೋಗವನ್ನು ಕೋರಿದ್ದಾರೆ.