ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ – ಚುನಾವಣಾಧಿಕಾರಿ ಆರ್.ಯಶೋಧ

ನಾಗಮಂಗಲ,ಏ.9-ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಆರ್.ಯಶೋಧ ತಿಳಿಸಿದರು.
ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರ ಕರ್ನಾಟಕದ ಪ್ರತಿಷ್ಠಿತ ಕ್ಷೇತ್ರವಾಗಿದ್ದು , ಮೇ 12ರಂದು ನಡೆಯುವ ಸಾವ್ರರ್ತಿಕ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಹದ್ದಿನ ಕಣ್ಣಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಪ್ಪ ಸೇರಿದಂತೆ ತಾಲ್ಲೂಕಿನ ಏಳು ಹೋಬಳಿಗಳಲ್ಲಿ 254 ಮತಗಟ್ಟೆಗಳಿದ್ದು , 2, 03,209 ಮತದಾರರು ಇದ್ದಾರೆ.1,02,776 ಪುರುಷರು ಹಾಗೂ 1,00,425 ಮಹಿಳೆಯರು ಹಾಗೂ ಇತರೆ ಎಂಟು ಮಂದಿ ಮತದಾರರಿದ್ದಾರೆ ಅಲ್ಲದೆ 91 ಮಂದಿ ಸೇವಾ ಮತದಾರರು ಇದ್ದಾರೆ.
ನಾಗಮಂಗಲ ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 99 ಹಾಗೂ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ 101 ಮತಗಟ್ಟೆಗಳು ಮಹಿಳಾ ಪ್ರಧಾನ ಮತಗಟ್ಟೆಗಳನ್ನಾಗಿರಿಸಲಾಗಿದೆ.
ಈ ಎರಡು ಮತದಾನ ಕೇಂದ್ರಗಳಲ್ಲಿ ಸಂಪೂರ್ಣ ಮಹಿಳಾ ಅಧಿಕಾರಿಗಳೇ ಕರ್ತವ್ಯ ನಿರ್ವಹಿಸಲಿದ್ದಾರೆ. ಅಂತೆಯೇ ವಿಕಲಚೇತನ ಅಧಿಕಾರಿಗಳಿಗೆ ಅವಕಾಶ ನೀಡುವದ್ದೇಶದಿಂದ ನಾಗಮಂಗಲ ಪಟ್ಟಣದ ಲೋಕೋಪಯೋಗಿ ಕಟ್ಟಡದಲ್ಲಿರುವ ಮತಗಟ್ಟೆ ಸಂಖ್ಯೆ 91ನ್ನು ವಿಕಲಚೇತನ ಪ್ರಧಾನ ಮತಗಟ್ಟೆಯನ್ನಾಗಿ ಮಾಡಲಾಗಿದೆ.
ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 58 ಸಾಮಾನ್ಯ, 66 ಅತಿಸೂಕ್ಷ್ಮ , 63 ಸೂಕ್ಷ್ಮಮತಗಟ್ಟೆ , 34 ದುರ್ಬಲ ಹಾಗೂ 33 ಕ್ರಿಟಿಕಲ್ ಮತಗಟ್ಟೆಗಳಿವೆ.
ಈ ಎಲ್ಲ ಕ್ಷೇತ್ರಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಪ್ರತಿ ಹೋಬಳಿಗೆ ಎರಡು ತಂಡಗಳಂತೆ 12 ಪ್ಲೇಯಿಂಗ್ ಸ್ಕ್ವಾಡ್ ತಂಡ ರಚಿಸಲಾಗಿದೆ ಎಂದು ಅವರು ವಿವರಿಸಿದರು.
ಮಿನಿ ವಿಧಾನಸೌಧದಲ್ಲಿ ದೂರು ನಿರ್ವಹಣಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ