ಕನಕಪುರ,ಏ.9- ತಾಲ್ಲೂಕಿನ ಸುಂದಗಟ್ಟ ಗ್ರಾಮದಲ್ಲಿ ರಾಜಕೀಯ ಪಕ್ಷವೊಂದರ ಪ್ರಭಾವಿ ವ್ಯಕ್ತಿಗಳು ಕುಕ್ಕರ್ಗಳನ್ನು ಹಂಚುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ದಾಳಿ ಮಾಡಿದ ಪ್ಲೆಯಿಂಗ್ ಸ್ಕ್ವಾಡ್ ಅಧಿಕಾರಿಗಳು ಯಾವುದೇ ದಾಖಲಾತಿ ಇಲ್ಲದ 75 ಕುಕ್ಕರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ರಾತ್ರಿ ಸುಂದಗಟ್ಟ ಗ್ರಾಮದಲ್ಲಿ ಕುಕ್ಕರ್ಗಳನ್ನು ಹಂಚುತ್ತಿರುವ ಬಗ್ಗೆ ಗ್ರಾಮಸ್ಥರು ಪ್ಲೆಯಿಂಗ್ ಸ್ಕ್ವಾಡ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಈ ಆಧಾರದ ಮೇಲೆ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ಸ್ಥಳದಲ್ಲಿದ್ದವರು ಕುಕ್ಕರ್ಗಳನ್ನು ವಾಹನದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ವಾಹನವನ್ನು ಪರಿಶೀಲಿಸಿದಾಗ ಯಾವುದೇ ದಾಖಲಾತಿಗಳಿಲ್ಲದ ಶಿನಾಗ್ ಎಂಬ ಕಂಪನಿಯ ಹೆಸರಿನ ಕುಕ್ಕರ್ಗಳನ್ನು ವಶಪಡಿಸಿಕೊಂಡು ಕೋಡಿಹಳ್ಳಿ ಪೆÇಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಹಾರೋಹಳ್ಳಿ ಸಮೀಪದ ಕಗ್ಗಳ್ಳಿಯಲ್ಲಿರುವ ಶಿನಾಗ್ ಕಂಪನಿಗೆ ಸೇರಿದ ಈ ಕುಕ್ಕರ್ಗಳನ್ನು ಖರೀದಿಸಲಾಗಿದೆಯೇ ಒಂದು ವೇಳೆ ಖರೀದಿಸಿದ್ದರೆ ಬಿಲ್ ಇದೆಯೇ? ಎಂಬುವುದು ತನಿಖೆಯಿಂದಷ್ಟೇ ತಿಳಿಯಬೇಕಿದೆ.
ಒಂದು ವೇಳೆ ಕಂಪನಿಯೇ ತೆರಿಗೆ ವಂಚಿಸುವ ಸಲುವಾಗಿ ರಾಜಕಾರಣಗಳಿಗೆ ಕುಕ್ಕರ್ಗಳನ್ನು ಬಡವರಿಗೆ ಹಂಚಲು ನೀಡಿದೆಯೇ? ಎಂಬ ಬಗ್ಗೆ ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೋಡಿಹಳ್ಳಿ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಈ ಕುಕ್ಕರ್ಗಳು ಹಂಚುತ್ತಿದ್ದವರು ಯಾವ ಪಕ್ಷದವರು ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.