
ಮಂಡ್ಯ, ಏ.9- ಮೇಲುಕೋಟೆಯಲ್ಲಿನ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಎರಡು ತಿಂಗಳ ಅವಧಿಯಲ್ಲಿ 12 ಲಕ್ಷ 63 ಸಾವಿರದ 793 ರೂ. ಕಾಣಿಕೆ ಸಂಗ್ರಹವಾಗಿದೆ.
ಇತ್ತೀಚೆಗಷ್ಟೇ ವೈರಮುಡಿ ಉತ್ಸವ ವೈಭವದಿಂದ ನೆರವೇರಿತ್ತು. ದೇಗುಲಕ್ಕೆ ಆಗಮಿಸಿದ್ದ ಭಕ್ತರು ಕಾಣಿಕೆ ಸಮರ್ಪಿಸಿ ಭಕ್ತ ಭಾವ ಮೆರೆದಿದ್ದಾರೆ.
ಗರ್ಭಗುಡಿಯ ಹುಂಡಿ ಸೇರಿದಂತೆ ದೇವಾಲಯದಲ್ಲಿನ ಒಟ್ಟು ನಾಲ್ಕು ಹುಂಡಿಗಳ ಎಣಿಕೆ ಕಾರ್ಯ ನಡೆಸಿದಾಗ 12.63 ಲಕ್ಷ ಸಂಗ್ರಹವಾಗಿರುವುದನ್ನು ದೇವಾಲಯದವರು ಪತ್ರಿಕೆಗೆ ತಿಳಿಸಿದ್ದಾರೆ.