
ತುಮಕೂರು, ಏ.9-ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದ ಮಹಿಳೆಯರನ್ನು ತಪಾಸಣೆ ಮಾಡಿದ ಚುನಾವಣಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ನಡೆದಿದೆ.
ಮಧುಗಿರಿ ಗುಂಡಕಲ್ ಗ್ರಾಮದಲ್ಲಿ ನಡೆಯುತ್ತಿದ್ದ ಖಾಸಗಿ ಕಾರ್ಯಕ್ರಮಕ್ಕೆ ಮಹಿಳೆಯರು ವಾಹನದಲ್ಲಿ ತೆರಳುತ್ತಿದ್ದಾಗ ತಪಾಸಣೆ ನಡೆಸಿದ ಚುನಾವಣಾಧಿಕಾರಿಗಳು, ಪರ್ಸ್ ಹಾಗೂ ಡೈರಿಗಳನ್ನು ಕಸಿದುಕೊಂಡು ನೀವು ಯಾವುದೋ ಪಕ್ಷದ ಪ್ರಚಾರಕ್ಕೆ ಬಂದಿದ್ದೀರ ಎಂದು ಪ್ರಶ್ನಿಸಿದಾಗ, ಇದರಿಂದ ರೊಚ್ಚಿಗೆದ್ದ ಮಹಿಳೆಯರು ನಾವು ಯಾವ ಪಕ್ಷದ ಪ್ರಚಾರಕ್ಕೂ ಬಂದಿಲ್ಲ. ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದೇವೆ ಎಂದರು.
ಎಷ್ಟು ಕೇಳಿಕೊಂಡರೂ ಬಿಡದ ಚುನಾವಣಾಧಿಕಾರಿಗಳು ವಾಹನಗಳ ಕೀ ಕಸಿದುಕೊಂಡು ಒತ್ತಾಯದಿಂದ ಡ್ರೈವರ್‍ಗಳನ್ನು ಜಾಗ ಖಾಲಿ ಮಾಡಿಸಿದರು. ಇದರಿಂದ ಮಹಿಳೆಯರು ಆರೇಳು ಕಿಲೋ ಮೀಟರ್ ನಡೆದುಕೊಂಡೇ ಹೋದರು.