ಬೆಂಗಳೂರು,ಏ.8- ಜಾತ್ಯತೀತ ಎಂದು ಹೇಳಿಕೊಳ್ಳುವ ಜೆಡಿಎಸ್, ಬಿಜೆಪಿ ಜತೆಯಲ್ಲೋ ಅಥವಾ ಕಾಂಗ್ರೆಸ್ನಲ್ಲಿರಲು ಬಯಸುತ್ತದೆಯೋ ಎಂಬುದನ್ನು ಬಹಿರಂಗವಾಗಬೇಕು. ಈ ವಿಷಯವಾಗಿ ಜೆಡಿಎಸ್ನವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ತಿಳಿಸಿದ್ದಾರೆ.
ಖಾಸಗಿ ಹೋಟೆಲ್ನಲ್ಲಿ ಉಪಹಾರ ಕೂಟ ನಡೆಸಿ ಪತ್ರಕರ್ತರ ಜತೆ ಅನೌಪಚಾರಿಕವಾಗಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಜಾತ್ಯತೀತ ನಿಲುವಿನ ಕರ್ನಾಟಕ ಕೋಮುವಾದಿ ನಾಗಪುರ ಸಿದ್ದಾಂತಗಳ ನಡುವೆ ಸಂಘರ್ಷ ನಡೆಯುತ್ತಿದೆ. ಈ ಹಂತದಲ್ಲಿ ಜಾತ್ಯತೀತ ತತ್ವಗಳ ಬಗ್ಗೆ ಮಾತನಾಡುವುದೇ ಆದರೆ ಜೆಡಿಎಸ್ ಮೊದಲು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಹುಲ್ಗಾಂಧಿ, ಚುನಾವಣೆಯ ನಂತರ ಯಾರ ಜತೆಗೂ ಮೈತ್ರಿ ಬೆಳೆಸಲು ಕಾಂಗ್ರೆಸ್ ಬಯಸುವುದಿಲ್ಲ. ಚುನಾವಣೆಗೂ ಮೊದಲು ಇಂತಹ ಸಂದರ್ಭಗಳನ್ನು ಪರಿಶೀಲಿಸುವುದಾಗಿ ಹೇಳಿದರು.