ಒಡಿಶಾದಲ್ಲಿ ಪ್ರಯಾಣಿಕರ ರೈಲೊಂದು ಎಂಜಿನ್ ಇಲ್ಲದೇ 10 ಕಿ.ಮೀ. ದೂರ ಚಲಿಸಿದೆ:

ಭುವನೇಶ್ವರ, ಏ.8-ಒಡಿಶಾದಲ್ಲಿ ಪ್ರಯಾಣಿಕರ ರೈಲೊಂದು ಎಂಜಿನ್ ಇಲ್ಲದೇ 10 ಕಿ.ಮೀ. ದೂರ ಚಲಿಸಿದ ಇರಿಸುಮುರಿಸಿನ ಪ್ರಸಂಗ ನಡೆದ ಬೆನ್ನಲ್ಲೇ ರೈಲ್ವೆ ಇಲಾಖೆಯ ಏಳು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ನಿನ್ನೆ ತಡ ರಾತ್ರಿ ಬಾಲಂಗಿರ್ ಜಿಲ್ಲೆಯ ಟಿಟ್ಲಾಗಢ್‍ನಲ್ಲಿ ಅಹಮದಾಬಾದ್-ಪುರಿ ಮಾರ್ಗದ ಎಕ್ಸ್‍ಪ್ರೆಸ್ ರೈಲಿನ ಬೋಗಿಗಳು ಎಂಜಿನ್ ಇಲ್ಲದೇ ಚಲಿಸಿದ ಸಂಗತಿ ಮಾಧ್ಯಮಗಳಲ್ಲಿ ಸುದ್ದಿಯಾದ ನಂತರ ಈವರೆಗೆ ಒಟ್ಟು ಏಳು ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.
ಎಂಜಿನ್‍ನಿಂದ ಬೇರ್ಪಟ್ಟ ಬೋಗಿಗಳು ಚಲಿಸಿದ ವಿಷಯ ತಿಳಿದ ನಂತರ ನಿನ್ನೆ ಮಧ್ಯರಾತ್ರಿಯೇ ಇಬ್ಬರನ್ನು ಸಸ್ಪೆಂಡ್ ಮಾಡಲಾಗಿತ್ತು, ಇಂದು ಬೆಳಗ್ಗೆ ಇತರ ಐವರು ಉದ್ಯೋಗಿಗಳನ್ನು ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯಕ್ಕಾಗಿ ಅಮಾನತ್ತಿನಡಲ್ಲಿಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ