ಬೆಂಗಳೂರು, ಏ.8- ಜೈಲಿನಿಂದ ಹೊರ ಬಂದು ಪುನಃ ಸುಲಿಗೆ ಮಾಡುತ್ತಿದ್ದ ಸುಲಿಗೆಕೋರನನ್ನು ಆರ್.ಟಿ.ನಗರ ಠಾಣೆ ಪೆÇಲೀಸರು ಬಂಧಿಸಿ 1.60 ಲಕ್ಷ ರೂ. ಬೆಲೆ ಬಾಳುವ 17 ಮೊಬೈಲ್ ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಹಳೆಯ ಕಳ್ಳನಾದ ಫ್ರೇಜರ್ಟೌನ್ನ ನಿವಾಸಿ ಅಮೀನ್ (26) ಬಂಧಿತ ಆರೋಪಿ.
ಈತನ ಬಂಧನದಿಂದ ಬಾಣಸವಾಡಿ ಠಾಣೆಯ ಸಾಮಾನ್ಯ ಕಳವು ಡಿ.ಜೆ.ಹಳ್ಳಿಯ ಮನೆಗಳವು, ಸಾಮಾನ್ಯ ಕಳವು ಮತ್ತು ಆರ್.ಟಿ. ನಗರ ಠಾಣೆಯಲ್ಲಿ ದಾಖಲಾಗಿದ್ದ ಸುಲಿಗೆ ಪ್ರಕರಣ ಪತ್ತೆಯಾಗಿದೆ.
ಈ ಪ್ರಕರಣವನ್ನು ಜೆ.ಸಿ ನಗರ ಉಪ ವಿಭಾಗದ ಎಸಿಪಿ ಶಿವಶಂಕರ್ ಮಾರ್ಗದರ್ಶನದಲ್ಲಿ ಆರ್.ಟಿ.ನಗರ ಠಾಣೆಯ ಇನ್ಸ್ಪೆಕ್ಟರ್ ಎಚ್.ಎಲ್.ನಂದೀಶ್ , ಪಿಎಸ್ಐ ಈರಪ್ಪ ರಿತ್ತಿ ಹಾಗೂ ಸಿಬ್ಬಂದಿಗಳ ತಂಡ ಬೇಧಿಸುವಲ್ಲಿ ಯಶಸ್ವಿಯಾಗಿದೆ.