ಮೈಸೂರು,ಏ.8- ಬ್ಯಾಂಕ್ವೊಂದರ ಅಸಿಸ್ಟೆಂಟ್ ಮ್ಯಾನೇಜರ್ರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಬೆಳಗಾವಿಯ ಶರತ್ ಕಲಪನವರ (25) ಆತ್ಮಹತ್ಯೆ ಮಾಡಿಕೊಂಡಿರುವ ಅಸಿಸ್ಟೆಂಟ್ ಮ್ಯಾನೇಜರ್. ನಗರದ ಕರೂರು ವೈಶ್ಯ ಬ್ಯಾಂಕ್ನಲ್ಲಿ ಇವರು ಅಸಿಸ್ಟೆಂಟ್ ಮ್ಯಾನೇಜರಾಗಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ 6 ತಿಂಗಳ ಹಿಂದೆಯಷ್ಟೆ ಬೆಳಗಾವಿಯಿಂದ ನಗರಕ್ಕೆ ವರ್ಗಾವಣೆಗೊಂಡು ಬಂದಿದ್ದರು.
ನಗರದ ಗನ್ಹೌಸ್ ಬಳಿ ಸ್ನೇಹಿತರೊಂದಿಗೆ ಬಾಡಿಗೆ ಮನೆಯಲಿ ವಾಸವಾಗಿದ್ದರು.
ಕೊಠಡಿಯಲ್ಲೇ ಫ್ಯಾನ್ಗೆ ನೇಣುಬಿಗಿದುಕೊಂಡು ಶರತ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಳಗ್ಗೆ ಈ ವಿಷಯ ತಿಳಿದು ಬಂದಿದ್ದು, ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದು, ನನ್ನ ಸಾವಿಗೆ ನಾನೇ ಕಾರಣ, ಕ್ಷಮಿಸಿ ಅಣ್ಣ ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಕೆ.ಆರ್.ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.