ಮನೆಯೊಂದರ ಕಿಟಕಿ ಮೂಲಕ ಕೈ ತೂರಿಸಿದ ಕಳ್ಳ10 ಸಾವಿರ ಇದ್ದ ಪರ್ಸ್ ಹಾಗೂ ಮೊಬೈಲ್‍ನ್ನು ಕಳ್ಳತನ

ಬೆಂಗಳೂರು,ಏ.7- ಮನೆಯೊಂದರ ಕಿಟಕಿ ಮೂಲಕ ಕೈ ತೂರಿಸಿದ ಕಳ್ಳ10 ಸಾವಿರ ಇದ್ದ ಪರ್ಸ್ ಹಾಗೂ ಮೊಬೈಲ್‍ನ್ನು ಕಳ್ಳತನ ಮಾಡಿರುವ ಘಟನೆ ಕೋಣನಕುಂಟೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜಂಬೂ ಸವಾರಿ ದಿಣ್ಣೆಯ ದೀಪಕ್ ಲೇಔಟ್ ನಿವಾಸಿ ಅರುಣ್ ಎಂಬುವರ ಮನೆಯಲ್ಲಿ ಇಂದು ಬೆಳಗಿನ ಜಾವ 1.30ರಲ್ಲಿ ಈ ಕಳ್ಳತನ ನಡೆದಿದೆ.

ಕೋಣನಕುಂಟೆ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೊಬೈಲ್ ಕಸಿದು ಪರಾರಿ:
ಜಯನಗರದ 8ನೇ ಬ್ಲಾಕ್ ಜೆಎಸ್‍ಎಸ್ ಶಾಲೆ ಸಮೀಪ ರಾತ್ರಿ 11.30ರಲ್ಲಿ ಶ್ರೀನಿವಾಸ್ ನಾಯಕ್ ಎಂಬುವರು ಮೊಬೈಲ್‍ನಲ್ಲಿ ಮಾತನಾಡುತ್ತಾ ನಿಂತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ಚೋರರು ಇವರ ಕೈಯಲ್ಲಿದ್ದ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ