ನಗರದಲ್ಲಿ ವಾಹನಗಳನ್ನು ಕಳ್ಳತನ 15 ಲಕ್ಷ ರೂ. ಮೌಲ್ಯದ ಕಾರು, ಎರಡು ಆಟೋ ರಿಕ್ಷಾ ಮತ್ತು 17 ಬೈಕ್‍ಗಳನ್ನು ವಶ

ಬೆಂಗಳೂರು,ಏ.7- ನಗರದಲ್ಲಿ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಮೂವರನ್ನು ಕೋಣನಕುಂಟೆ ಠಾಣೆ ಪೆÇಲೀಸರು ಬಂಧಿಸಿ 15 ಲಕ್ಷ ರೂ. ಮೌಲ್ಯದ ಕಾರು, ಎರಡು ಆಟೋ ರಿಕ್ಷಾ ಮತ್ತು 17 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಶಾಂತ್(19), ಪ್ರಮೋದ್(19), ಅಭಿ(22) ಬಂಧಿತ ಆರೋಪಿಗಳು.
ದಕ್ಷಿಣ ವಿಭಾಗದ ಕೋಣನಕುಂಟೆ ಮತ್ತು ಪುಟ್ಟೇನಹಳ್ಳಿ ವ್ಯಾಪ್ತಿಗಳಲ್ಲಿ ಆಗಿಂದಾಗ್ಗೆ ಪಲ್ಸರ್ ಬೈಕ್‍ಗಳು ಕಳವಾಗುತ್ತಿದ್ದುದ್ದನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಡಾ.ಶರಣಪ್ಪ ಅವರು ಸುಬ್ರಹ್ಮಣ್ಯಪುರದ ಉಪವಿಭಾಗದ ಎಸಿಪಿ ಕಾಂತರಾಜು ಅವರ ಉಸ್ತುವಾರಿಯಲ್ಲಿ ಇನ್‍ಸ್ಪೆಕ್ಟರ್ ಸದಾನಂದ ಅವರನ್ನೊಳಗೊಂಡ ಸಿಬ್ಬಂದಿಗಳ ತಂಡವನ್ನು ರಚಿಸಿದ್ದರು.
ಈ ತಂಡ ಹಲವು ಮಾಹಿತಿಗಳನ್ನು ಕಲೆ ಹಾಕಿ ಪಲ್ಸರ್ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರನ್ನು ಬಂಧಿಸಿ ಕಾರು, ಆಟೋ ರಿಕ್ಷಾ ಹಾಗೂ 17 ಬೈಕ್‍ಗಳು, ಮೂರು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಬಂಧನದಿಂದ ಕೋಣನಕುಂಟೆ ಠಾಣೆಗೆ ಸಂಬಂಧಿಸಿದಂದು ಕಾರು ಕಳವು ಪ್ರಕರಣ, ಎರಡು ಆಟೋರಿಕ್ಷಾ ಕಳ್ಳತನ ಪ್ರಕರಣ, ಆರು ಬೈಕ್ ಕಳ್ಳತನ ಮತ್ತು ಪುಟ್ಟೇನಹಳ್ಳಿ ಠಾಣೆಯ ನಾಲ್ಕು ದ್ವಿಚಕ್ರ ವಾಹನ ಕಳವು ಪ್ರಕರಣ, ಮೈಕೋಲೇಔಟ್, ಬ್ಯಾಟರಾಯನಪುರ ಠಾಣೆಯ ಒಂದೊಂದು ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಸೇರಿ ಒಟ್ಟು 20 ಪ್ರಕರಣಗಳು ಪತ್ತೆಯಾಗಿದೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಕೋಣನಕುಂಟೆ ಪೆÇಲೀಸರ ಈ ಕಾರ್ಯವನ್ನು ನಗರ ಪೆÇಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ