ರೈಲಿಗೆ ಸಿಕ್ಕಿ ಮಹಿಳೆ ಆತ್ಮಹತ್ಯೆ

ಬೆಂಗಳೂರು, ಏ.7-ರೈಲಿಗೆ ಸಿಕ್ಕಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಂಟೋನ್ಮೆಂಟ್ ರೈಲ್ವೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆ ಸುಮಾರು 40 ವರ್ಷದವರಂತೆ ಕಾಣುತ್ತಿದ್ದು, ಇವರ ಹೆಸರು, ವಿಳಾಸ ತಿಳಿದುಬಂದಿಲ್ಲ.

ಕೆ.ಆರ್.ಪುರ ರೈಲ್ವೆ ನಿಲ್ದಾಣದ ಸಮೀಪ ರಾತ್ರಿ 11.30ಕ್ಕೆ ಸುಮಾರಿಗೆ ಈ ಮಹಿಳೆ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಿಳಿಬಣ್ಣದ ಚೂಡಿದಾರ್ ಧರಿಸಿರುವ ಈ ಮಹಿಳೆ ನೋಡಲು ಗೃಹಿಣಿಯಂತೆ ಕಾಣುತ್ತಾರೆ. ಶವವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಇಡಲಾಗಿದೆ.
ವಾರಸುದಾರರು ಕೂಡಲೇ ಕಂಟೋನ್ಮೆಂಟ್ ರೈಲ್ವೆ ಪೆÇಲೀಸರನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ