ಮಹಿಳೆಯನ್ನು ಬೈಕ್‍ನಲ್ಲಿ ಹಿಂಬಾಲಿಸಿದ ಸರಗಳ್ಳರು 65 ಗ್ರಾಂ ಸರದೊಂದಿಗೆ ಪರಾರಿ

ಬೆಂಗಳೂರು, ಏ.6- ದೇವಸ್ಥಾನಕ್ಕೆ ಹೋಗಿ ಮನೆಗೆ ನಡೆದು ಹೋಗುತ್ತಿದ್ದ ಮಹಿಳೆಯನ್ನು ಬೈಕ್‍ನಲ್ಲಿ ಹಿಂಬಾಲಿಸಿದ ಸರಗಳ್ಳರು 65 ಗ್ರಾಂ ಸರ ಎಗರಿಸಿರುವ ಘಟನೆ ಕಾಮಾಕ್ಷಿಪಾಳ್ಯ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೆಎಚ್‍ಬಿ ಕಾಲೋನಿಯ ಎಂಇಜಿ ಕ್ವಾಟ್ರರ್ಸ್‍ನ ಪಾರ್ಕ್ ಬಳಿ ಶಾಂತ ಎಂಬುವರು ರಾತ್ರಿ 9ಗಂಟೆಯಲ್ಲಿ ನಡೆದು ಹೋಗುತ್ತಿದ್ದರು. ಈ ವೇಳೆ ಬೈಕ್‍ನಲ್ಲಿ ಹಿಂಬಾಲಿಸಿದ ಇಬ್ಬರು ಸರಗಳ್ಳರು ಸಮಯ ಸಾಧಿಸಿ ಅವರ ಕೊರಳಲ್ಲಿದ್ದ 65 ಗ್ರಾಂ ಸರ ಎಗರಿಸಿದ್ದಾರೆ.

ಸಹಾಯಕ್ಕಾಗಿ ಕೂಗಿಕೊಂಡರೂ ಪ್ರಯೋಜನವಾಗಿಲ್ಲ. ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ