ನವದೆಹಲಿ/ಅಮರಾವತಿ, ಏ.6-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಎನ್.ಚಂದ್ರಬಾಬು ನಾಯ್ಡು, ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವಂತೆ ಟಿಡಿಪಿ ಸಂಸದರಿಗೆ ಕರೆ ನೀಡಿದ್ದಾರೆ. ಟಿಡಿಪಿ ಸಂಸದರೊಂದಿಗೆ ಟೆಲಿ-ಕಾನ್ಫರೆನ್ಸ್ ಸಂವಾದ ನಡೆಸಿದ ಅವರು, ಟಿಡಿಪಿ ಸದಸ್ಯರು ದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಳಿಸಬೇಕು. ತಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ದ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ನ್ಯಾಯಕ್ಕಾಗಿ ಆಗ್ರಹಿಸಬೇಕು ಎಂದು ಕರೆ ನೀಡಿದ್ದಾರೆ.
ಅಮರಾವತಿ ವರದಿ : ಇಂದು ಬೆಳಗ್ಗೆ ಆಂಧ್ರಪ್ರದೇಶದ ಅಮರಾವತಿಯಲ್ಲಿ ಕೇಂದ್ರ ಧೋರಣೆ ವಿರುದ್ಧ ಸಚಿವರು ಮತ್ತು ಟಿಡಿಪಿ ಸೈಕಲ್ ರ್ಯಾಲಿಯ ನೇತೃತ್ವ ವಹಿಸಿದ ನಾಯ್ಡು, ಬಿಜೆಪಿ ಸದ್ಯದಲ್ಲೇ ಇಡೀ ದೇಶದಿಂದ ತಿರಸ್ಕøತವಾಗಲಿದೆ ಎಂದು ಭವಿಷ್ಯ ನುಡಿದರು.