ಜಿಮ್ನಾಸ್ಟಿಕ್: ಭಾರತದ ರಾಕೇಶ್ ಪಾತ್ರಾ ಹಾಗೂ ಯೋಗೇಶ್ವರ್ ಸಿಂಗ್ ಫೈನಲ್ಸ್‍ಗೆ

ಗೋಲ್ಡ್‍ಕೋಸ್ಟ್ , ಏ.6- ಜಿಮ್ನಾಸ್ಟಿಕ್ ಅಂಗಳದಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ರಾಕೇಶ್ ಪಾತ್ರಾ ಹಾಗೂ ಯೋಗೇಶ್ವರ್ ಸಿಂಗ್ ಅವರು ಫೈನಲ್ಸ್‍ಗೆ ಪ್ರವೇಶಿಸಿದ್ದು ಪದಕ ಗೆಲ್ಲುವ ಆಸೆ ಚಿರುಗಿಸಿದ್ದಾರೆ. ಇಂದು ನಡೆದ ಪುರುಷರ ಜಿಮ್ನಾಸ್ಟಿಕ್ ರಿಂಗ್‍ಗಳ ನಡುವೆ ಉತ್ತಮ ಪ್ರದರ್ಶನ ನೀಡಿದ ಯೋಗೇಶ್ವರ್‍ದತ್ 75.300 ಪಾಯಿಂಟ್ಸ್ ಗೆಲ್ಲುವ ಮೂಲಕ 21ನೆ ಶ್ರೇಯಾಂಕಿತರಾಗಿ ಫೈನಲ್ಸ್‍ಗೆ ಲಗ್ಗೆ ಇಟ್ಟಿದ್ದಾರೆ.
ಫೆÇ್ರೀ ಎಕ್ಸರ್‍ಸೈಜ್‍ನಲ್ಲಿ 12.750 ಅಂಕ, ಫೆÇೀಮೇಲ್ ಹಾರ್ಸ್ ವಿಭಾಗದಲ್ಲಿ 12.350, ವಾಲೆಟ್ (13.050), ಪ್ಯಾರೇಲ್ ಬಾರ್ಸ್ ಹಾಗೂ ಹಾರಿಜೆಂಟಲ್ ವಿಭಾಗಗಳಲ್ಲಿ ಕ್ರಮವಾಗಿ 12.300, 12.400 ಪಾಯಿಂಟ್‍ಗಳನ್ನು ಸೂರೆಗೊಂಡರು. 2010ರ ಕಾಮನ್‍ವೆಲ್ತ್‍ನಲ್ಲಿ ಪದಕ ವಿಜೇತರಾಗಿದ್ದ ಅಶೀಶ್‍ಕುಮಾರ್ 25ನೆ ಶ್ರೇಯಾಂಕಿತರಾಗಿ ಫೈನಲ್ಸ್‍ನಿಂದ ಹೊರಗುಳಿದು ನಿರಾಸೆ ಮೂಡಿಸಿದರು. ಇಂದು ನಡೆದ ಪುರುಷರ ಜಿಮ್ನಾಸ್ಟಿಕ್‍ನ ಗುಂಪು ವಿಭಾಗದಲ್ಲಿ ಇಂಗ್ಲೆಂಡ್, ಕೆನಡಾ, ಸ್ಕಾಟ್‍ಲೆಂಡ್ ಕ್ರಮವಾಗಿ ಚಿನ್ನ , ಬೆಳ್ಳಿ, ಕಂಚು ಪದಕಗಳನ್ನು ಗಳಿಸಿದರೆ, ಭಾರತ ತಂಡದ ಅಥ್ಲೀಟ್ಸ್‍ಗಳು 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ