ನ್ಯೂಸ್ ಪೆÇೀರ್ಟಲ್ ಹಾಗೂ ಮಾಧ್ಯಮ ವೆಬ್ ಸೈಟ್‍ಗಳ ನಿಯಂತ್ರಣ:

ನವದೆಹಲಿ,ಏ.6-ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನ್ಯೂಸ್ ಪೆÇೀರ್ಟಲ್ ಹಾಗೂ ಮಾಧ್ಯಮ ವೆಬ್ ಸೈಟ್‍ಗಳ ನಿಯಂತ್ರಣಕ್ಕಾಗಿ ನಿಯಮ ರೂಪಿಸಲು 10 ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿ ಸದಸ್ಯರು ನ್ಯೂಸ್ ಪೆÇೀರ್ಟಲ್ ಹಾಗೂ ಮಾಧ್ಯಮ ವೆಬ್ಸೈಟ್ ಗಳ ನಿಯಂತ್ರಣಕ್ಕಾಗಿ ನಿಯಮ ರೂಪಿಸಲಿದ್ದಾರೆ.
ಏ.4ರಂದು ಬಿಡುಗಡೆ ಮಾಡಿದ ಆದೇಶದ ಪ್ರಕಾರ ಈ ಸಮಿತಿಯಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಗೃಹ ಸಚಿವಾಲಯದ ಸದಸ್ಯರು ಇರಲಿದ್ದಾರೆ. ಇದರ ಜೊತೆಗೆ ಕಾನೂನು ಇಲಾಖೆ ಹಾಗೂ ಪ್ರಸಾರ ಇಲಾಖೆ ಕಾರ್ಯದರ್ಶಿಗಳು ಇರಲಿದ್ದಾರೆ.
ಈ ಸಮಿತಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ), ನ್ಯೂಸ್ ಬ್ರಾಡ್‍ಕಾಸ್ಟ್ ಅಸೋಸಿಯೇಶನ್ ಮತ್ತು ಇಂಡಿಯನ್ ಬ್ರಾಡ್ ಕಾಸ್ಟರ್ಸ್ ಫೆಡರೇಶನ್ ಪ್ರತಿನಿಧಿಗಳನ್ನು ಒಳಗೊಂಡಿದೆ. ಖಾಸಗಿ ಮಾಧ್ಯಮಗಳು ಕಾರ್ಯಕ್ರಮ ಹಾಗೂ ಜಾಹೀರಾತು ಸಂಹಿತೆ ನಿಯಂತ್ರಣದಲ್ಲಿವೆ. ಮುದ್ರಣ ಮಾಧ್ಯಮಗಳನ್ನು ಪಿಸಿಐ ನಿಯಂತ್ರಿಸುತ್ತದೆ. ಆದರೆ ನ್ಯೂಸ್ ಪೆÇೀರ್ಟಲ್ ಹಾಗೂ ಆನ್‍ಲೈನ್ ಮಾಧ್ಯಮಗಳನ್ನು ನಿಯಂತ್ರಿಸಲು ಯಾವುದೇ ನಿಯಮ ಹಾಗೂ ಮಾರ್ಗಸೂಚಿಗಳಿರಲಿಲ್ಲ. ಸುಳ್ಳು ಸುದ್ದಿಯ ಮೇಲೆ ನಿಯಂತ್ರಣ ಹೇರುವುದೇ ಮುಖ್ಯ ಉದ್ದೇಶವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ