ಗೋಲ್ಡ್ಕೋಸ್ಟ್, ಏ.5- ಈ ಬಾರಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಮಹಿಳಾ ಹಾಕಿ ತಂಡ ಆರಂಭಿಕ ಪಂದ್ಯದಲ್ಲಿ ಸೋಲು ಮೂಲಕ ನಿರಾಶೆ ಮೂಡಿಸಿದ್ದಾರೆ. ಇಂದು ನಡೆದ ಹಾಕಿಯ ಮೊದಲ ಸುತ್ತಿನಲ್ಲಿ ವೇಲ್ಸ್ ತಂಡವನ್ನು ಎದುರಿಸಿದ ಭಾರತದ ಮಹಿಳಾ ತಂಡವು 2-3 ಗೋಲುಗಳಿಂದ ಸೋಲು ಮೂಲಕ ವೇಲ್ಸ್ ವಿರುದ್ಧ ಮುಂದುವರಿಸಿಕೊಂಡು ಬಂದಿದ್ದ ಜೈತ್ರಯಾತ್ರೆಗೆ ಬ್ರೇಕ್ ಹಾಕಿಕೊಂಡಿದ್ದಾರೆ.
ಆರಂಭದಿಂದಲೂ ಉತ್ತಮ ಪೈಪೆÇೀಟಿ ನೀಡಿದ ವೇಲ್ಸ್ ಆಟಗಾರ್ತಿಯರಾದ ಲಿಸೆ ಡೆಲ್ಲಿ (7ನಿಮಿಷ), ಸೈನ್ ಫ್ರೆಂಚ್ (26 ನಿಮಿಷ), ನತಾಶಾ ಮಾರ್ಕೆ ಜೋನ್ಸ್ (57 ನಿಮಿಷ)ಗಳಲ್ಲಿ ಗೋಲು ಗಳಿಸಿದರೆ, ಭಾರತ ತಂಡದ ಪರ ನಾಯಕಿ ರಾಣಿ (34ನೇ ನಿಮಿಷ)ದಲ್ಲಿ ಗೋಲು ಗಳಿಸಿದರೂ ಕೂಡ ತಂಡವನ್ನು ಸೋಲಿನಿಂದ ಪಾರು ಮಾಡಲು ಎಡವಿದ್ದಾರೆ. ಭಾರತದ ನಿಕ್ಕಿ ಪ್ರಧಾನ್ ಒಂದು ಗೋಲು ಗಳಿಸಿ ಪಂದ್ಯಕ್ಕೆ ರೋಚಕ ತಿರುವು ಕೊಟ್ಟರಾದರೂ ಕೊನೆಯ ಕ್ಷಣದಲ್ಲಿ ನತಾಶಾ ಬಾರಿಸಿದ ಗೋಲಿನಿಂದ ವೇಲ್ಸ್ 2-3 ಗೋಲುಗಳಿಂದ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿತು.
ದೀಪಾ ಗ್ರೇಸ್ ದಾಖಲೆ:
ಮಹಿಳಾ ಹಾಕಿ ತಂಡದ ನಾಯಕಿ ವೇಲ್ಸ್ ವಿರುದ್ಧ ಇಂದು ನಡೆದ ಪಂದ್ಯದ ನಾಯಕತ್ವವನ್ನು ವಹಿಸಿಕೊಳ್ಳುವ ಮೂಲಕ ಭಾರತದ ತಂಡವನ್ನು 150 ಪಂದ್ಯಗಳಲ್ಲಿ ಮುಂದುವರೆಸಿದ ದಾಖಲೆ ಬರೆದಿದ್ದಾರೆ.