ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್ ದೋಷಿ, ಕೆಲವೇ ಹೊತ್ತಿನಲ್ಲಿ ಶಿಕ್ಷೆ ಪ್ರಮಾಣ ಪ್ರಕಟ

ಜೈಪುರ,ಏ.5

ಎರಡು ದಶಕಗಳ ಹಿಂದಿನ ಕೃಷ್ಣಮೃಗಗಳ ಬೇಟೆ ಪ್ರಕರಣದಲ್ಲಿ ಬಾಲಿವುಡ್‌‌ ನಟ ಸಲ್ಮಾನ್‌ ಖಾನ್‌ ದೋಷಿ ಎಂದು ಕೋರ್ಟ್‌ ತೀರ್ಪು ನೀಡಿದ್ದು, ಕೆಲವೇ ಹೊತ್ತಿನಲ್ಲಿ ಶಿಕ್ಷೆ ಪ್ರಮಾಣ ಪ್ರಕಟ ಮಾಡಲಿದೆ. ಅಂತೆಯೇ ಪ್ರಕರಣದಲ್ಲಿನ ಇತರ ಆರೋಪಿಗಳನ್ನು ಕೋರ್ಟ್‌ ಖುಲಾಸೆಗೊಳಿಸಿದೆ.

ಸಲ್ಮಾನ್‌ ವಿರುದ್ಧದ 1998ರ ಕೃಷ್ಣಮೃಗಗಳ ಬೇಟೆ ಪ್ರಕರಣದ ತೀರ್ಪನ್ನು ಗುರುವಾರ ರಾಜಸ್ಥಾನದ ಜೋಧ್‌ಪುರ್‌‌ ಕೋರ್ಟ್‌ ಪ್ರಕಟಿಸಿದೆ.
‘ಹಮ್ ಸಾಥ್‌ ಸಾಥ್‌ ಹೈ’ ಚಿತ್ರದ ಚಿತ್ರೀಕರಣದ ವೇಳೆ ಜೋಧ್‌ಪುರ್‌ ಸಮೀಪದ ಗ್ರಾಮದಲ್ಲಿ ಎರಡು ಕೃಷ್ಣಮೃಗ ಬೇಟೆಯಾಡಿದ ಆರೋಪ ಬಾಲಿವುಡ್‌‌ ನಟ-ನಟಿಯರ ಮೇಲಿತ್ತು. ಈ ಪ್ರಕರಣದ ಇತರ ಆರೋಪಿಗಳಾದ ಸೈಫ್‌ ಅಲಿ ಖಾನ್‌, ಸೋನಾಲಿ ಬೇಂದ್ರೆ, ಟಬು ಹಾಗೂ ನೀಲಂ ಅವರನ್ನು ಕೋರ್ಟ್‌ ಖುಲಾಸೆಗೊಳಿಸಿದೆ.
ಸುದೀರ್ಘ 20 ವರ್ಷಗಳ ವಿಚಾರಣೆ ಬಳಿಕ ಇಂದು ಜೋಧ್‌ಪುರ್‌‌ ನ್ಯಾಯಾಲಯ ಪ್ರಕರಣದ ತೀರ್ಪು ಪ್ರಕಟಿಸಿದೆ. ಮಾರ್ಚ್‌ 28ರಂದು ಪ್ರಕರಣದ ಅಂತಿಮ ವಾದ-ಪ್ರತಿವಾದ ಮುಕ್ತಾಯವಾಗಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ