ಕಾಮನ್‌ವೆಲ್ತ್‌ ಗೇಮ್ಸ್‌: ಮೊದಲ ದಿನವೇ ಭಾರತಕ್ಕೆ ‘ಬೆಳ್ಳಿ’ ತಂದ ಕನ್ನಡಿಗ ಉಡುಪಿಯ ಗುರುರಾಜ್

ಸಿಡ್ನಿ,ಏ.5

ಆಸ್ಟ್ರೇಲಿಯಾದಲ್ಲಿ ಆರಂಭವಾಗಿರುವ ಕಾಮನ್‌ವೆಲ್ತ್‌‌ ಕ್ರೀಡಾಕೂಟದ ಮೊದಲ ದಿನವೇ ಕನ್ನಡಿಗ ವಿಶ್ವದ ಗಮನ ಸೆಳೆದಿದ್ದಾರೆ. ಆ ಮೂಲಕ ಉಡುಪಿಯ ಗುರುರಾಜ್‌ ವೇಟ್‌ ಲಿಫ್ಟಿಂಗ್‌‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ.

21ನೇ ಕಾಮನ್‌ವೆಲ್ತ್‌ ಕ್ರೀಡಾಕೂಟ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದ್ದು, ಮೊದಲ ದಿನವೇ ಕನ್ನಡಿಗ ಗುರುರಾಜ್‌ ಪದಕಕ್ಕೆ ಮುತ್ತಿಕ್ಕಿದ್ದಾರೆ. 56 ಕೆಜಿ ವಿಭಾಗದ ವೇಟ್‌ ಲಿಫ್ಟಿಂಗ್‌‌ನಲ್ಲಿ ಗುರುರಾಜ್‌ ಬೆಳ್ಳಿ ಪದಕ ಗೆದ್ದಿದ್ದಾರೆ.

ಈ ಹಿಂದೆ 2017ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಚಾಂಪಿಯನ್‌‌ಶಿಪ್‌ನಲ್ಲಿ ಕಂಚು ಪದಕ ಹಾಗೂ 2016ರಲ್ಲಿ ದಕ್ಷಿಣ ಏಷ್ಯಾ ಗೇಮ್ಸ್‌‌ನಲ್ಲಿ ಗುರುರಾಜ್‌ ಚಿನ್ನದ ಪದಕ ಗೆದ್ದಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ