ಕಾಮನ್ ವೆಲ್ತ್ ಗೇಮ್ಸ್: ಕನ್ನಡಿಗನಿಂದ ದೇಶಕ್ಕೆ ಮೊದಲ ಪದಕ…ಅಭಿನಂದನೆ ತಿಳಿಸಿದ ವೀರೂ

ಸಿಡ್ನಿ,ಏ.5

ಆಸ್ಟ್ರೇಲಿಯಾದಲ್ಲಿ ಆರಂಭವಾಗಿರುವ ಕಾಮನ್‌ವೆಲ್ತ್‌‌ ಕ್ರೀಡಾಕೂಟದಲ್ಲಿ ಕನ್ನಡಿಗನ ಪರಿಶ್ರಮದಿಂದಾಗಿ ಭಾರತಕ್ಕೆ ಮೊದಲ ಪದಕ ಬಂದಿದೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಪದಕ ಗೆದ್ದ ಗುರುರಾಜ್‌ಗೆ ಅಭಿನಂದನೆ ತಿಳಿಸಿದ್ದಾರೆ.
ಉಡುಪಿಯ ಗುರುರಾಜ್‌ ವೇಟ್‌ ಲಿಫ್ಟಿಂಗ್‌‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ. 21ನೇ ಕಾಮನ್‌ವೆಲ್ತ್‌ ಕ್ರೀಡಾಕೂಟ ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯುತ್ತಿದೆ. ಮೊದಲ ದಿನವೇ ಕನ್ನಡಿಗ ಗುರುರಾಜ್‌ ಪದಕಕ್ಕೆ ಮುತ್ತಿಕ್ಕಿದ್ದಾರೆ. 56 ಕೆಜಿ ವಿಭಾಗದ ವೇಟ್‌ ಲಿಫ್ಟಿಂಗ್‌‌ನಲ್ಲಿ 249 ಕೆ.ಜಿ ತೂಕ ಎತ್ತುವ ಮೂಲಕ ಗುರುರಾಜ್‌ ಬೆಳ್ಳಿ ಪದಕ ಗೆದ್ದಿದ್ದಾರೆ.
ಇನ್ನು ಕನ್ನಡಿಗ ಗುರುರಾಜ್‌ರ ಸಾಧನೆಯಿಂದಾಗಿ ಭಾರತ ಪದಕಗಳ ಖಾತೆ ತೆಗೆದಿದೆ. ಇದರಿಂದ ಸಂತಸಗೊಂಡ ಸೆಹ್ವಾಗ್‌, ನಾವು ಮೊದಲ ಪದಕವನ್ನು ಗೆದ್ದಿದ್ದೇವೆ. ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿರುವ ಗುರುರಾಜ್‌ಗೆ ಅಭಿನಂದನೆಗಳು. ಗುರುರಾಜ್‌ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ವೀರೇಂದ್ರ ಸೆಹ್ವಾಗ್ ಟ್ವೀಟ್‌ ಮಾಡಿದ್ದಾರೆ.
ಇನ್ನು ವಿರೇಂದ್ರ ಸೆಹ್ವಾಗ್‌ ಟ್ವೀಟ್‌ ವೈರಲ್‌ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ