ವಿಶ್ವದ ಅತಿದೊಡ್ಡ ಆನ್‍ಲೈನ್ ವಿಡಿಯೋ ವೆಬ್‍ಸೈಟ್ ಯೂ ಟ್ಯೂಬ್ ಕೇಂದ್ರ ಕಚೇರಿ ಮೇಲೆ ಗುಂಡಿನ ದಾಳಿ: ಆತ್ಮಹತ್ಯೆ

ವಾಷಿಂಗ್ಟನ್, ಏ.4- ಅಮೆರಿಕಾದ ಸಿಲಿಕಾನ್ ವ್ಯಾಲಿ ಬಳಿ ಸ್ಯಾನ್ ಬ್ರುನೋದಲ್ಲಿನ ವಿಶ್ವದ ಅತಿದೊಡ್ಡ ಆನ್‍ಲೈನ್ ವಿಡಿಯೋ ವೆಬ್‍ಸೈಟ್ ಯೂ ಟ್ಯೂಬ್ ಕೇಂದ್ರ ಕಚೇರಿ ಮೇಲೆ ಗುಂಡಿನ ದಾಳಿ ನಡೆಸಿ ಹಲವರನ್ನು ಗಾಯಗೊಳಿಸಿದ ಮಹಿಳೆಯೊಬ್ಬಳು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಈ ಘಟನೆಯಲ್ಲಿ ಐವರು ತೀವ್ರ ಗಾಯಗೊಂಡಿದ್ದು, 36 ವರ್ಷದ ವ್ಯಕ್ತಿಯೊಬ್ಬನ ಸ್ಥಿತಿ ಶೋಚನೀಯವಾಗಿದೆ ಎಂದು ಸ್ಥಳೀಯ ಪೆÇಲೀಸರು ತಿಳಿಸಿದ್ದಾರೆ.
ಸ್ಯಾನ್ ಬ್ರುನೋದ 901 ಚೆರ್ರಿ ಅವಿನ್ಯೂನಲ್ಲಿರುವ ಯೂ ಟ್ಯೂಬ್ ಕ್ಯಾಂಪಸ್‍ನಲ್ಲಿ ಗುಂಡಿನ ದಾಳಿ ಬಗ್ಗೆ ರಾತ್ರಿ 12.46ರಲ್ಲಿ (ಸ್ಥಳೀಯ ಕಾಲಮಾನ) ಪೆÇಲೀಸ್ ಇಲಾಖೆಗೆ ದೂರವಾಣಿ ಕರೆಗಳು ಬಂದವು. ತಕ್ಷಣ ಸ್ಥಳಕ್ಕೆ ಪೆÇಲೀಸರು ಧಾವಿಸಿದರು. ಕೇಂದ್ರ ಕಚೇರಿ ಆವರಣದಲ್ಲಿ ಐವರು ಗುಂಡೇಟಿನಿಂದ ನರಳುತ್ತಿದ್ದರು. ಇನ್ನೊಂದೆಡೆ ಮಹಿಳೆಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಯಿತು.
ಮಹಿಳೆಯಿಂದ ಗುಂಡಿನ ದಾಳಿ ನಡೆಯುತ್ತಿದ್ದಂತೆ ಕಚೇರಿಯಲ್ಲಿದ್ದ ಅನೇಕರು ಓಡಿ ಹೋದರು. ಇದರಿಂದಾಗಿ ಹೆಚ್ಚಿನ ಸಾವು-ನೋವುಗಳಾಗಲಿಲ್ಲ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳು ಶೀಘ್ರ ಗುಣಮುಖರಾಗಲೆಂದು ಅವರು ಟ್ವೀಟರ್‍ನಲ್ಲಿ ಹೇಳಿದ್ಧಾರೆ.
ಈ ಘಟನೆ ಬಗ್ಗೆ ತನಿಖೆ ಮುಂದುವರಿಯುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ