ಚೀನಾ ಮತ್ತು ಅಮೆರಿಕ ನಡುವೆ ವಾಣಿಜ್ಯ ಸಮರ:

ವಾಷಿಂಗ್ಟನ್, ಏ.4- ಚೀನಾ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ವಾಣಿಜ್ಯ ಸಮರ ಮತ್ತಷ್ಟು ತೀವ್ರಗೊಂಡಿದೆ. ಚೀನಾದ 1,300 ಉತ್ಪನ್ನಗಳ ಮೇಲೆ 50 ಶತಕೋಟಿ ಡಾಲರ್‍ಗಳ ಸುಂಕ ವಿಧಿಸುವುದಾಗಿ ಅಮೆರಿಕ ಇಂದು ಘೋಷಿಸಿದೆ. ಇದೇ ವೇಳೆ ಅಮೆರಿಕ ವಿಧಿಸಿರುವ ಸುಂಕದ ವಿರುದ್ಧ ಅದೇ ಸಾಮಥ್ರ್ಯದ ಪ್ರತೀಕಾರ ಕ್ರಮಗಳನ್ನು ಕೈಗೊಳ್ಳುವುದಾಗಿಯೂ ಚೀನಾ ತಿರುಗೇಟು ನೀಡಿದೆ.
ಈಗಾಗಲೇ ಚೀನಾದ ಪ್ರಮುಖ ಉತ್ಪನ್ನಗಳ ಮೇಲೆ ಭಾರೀ ಸುಂಕ ವಿಧಿಸಿರುವ ಅಮೆರಿಕ ಇಂದು ಆ ದೇಶದಿಂದ ಆಮದಾಗುವ ವಸ್ತುಗಳ ಮೇಲೆ ಹೆಚ್ಚುವರಿಯಾಗಿ ಶೇ.25ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದೆ. ಇದು ಚೀನಾದ 1,300 ಉತ್ಪನ್ನಗಳ ಮೇಲೆ 50 ಶತಕೋಟಿ ಡಾಲರ್ ತೆರಿಗೆ ಹೊರೆ ಬೀಳಲಿದೆ.
ಅಮೆರಿಕದ 1,200 ಉತ್ಪನ್ನಗಳ ಮೇಲೆ ಚೀನಾ ಇತ್ತೀಚೆಗೆ ಭಾರೀ ಸುಂಕ ವಿಧಿಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ಈ ಕ್ರಮ ಅನುಸರಿಸಿದೆ.
ಅಮೆರಿಕದ ಈ ನಿರ್ಧಾರದಿಂದ ಕುಪಿತಗೊಂಡಿರುವ ಚೀನಾ ತಿರುಗೇಟು ನೀಡಲು ಸಿದ್ದವಾಗಿದ್ದು, ಅಮೆರಿಕದ ವಿಧಿಸಿರುವ ಸುಂಕದ ವಿರುದ್ಧ ಅದೇ ಸಾಮಥ್ರ್ಯದ ಕ್ರಮಗಳನ್ನು ಕೈಗೊಳ್ಳುವುದಾಗಿಯೂ ಹೇಳಿದೆ. ಚೀನಾ ಮತ್ತು ಅಮೆರಿಕದ ಟ್ರೇಡ್ ವಾರ್ ತೀವ್ರಗೊಂಡಿದ್ದು, ಇದರಿಂದ ಏಷ್ಯಾ ಪ್ರಾಂತ್ಯದ ವಾಣಿಜ್ಯ-ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ