ಮಹಿಳೆಯರು ಜೀನ್ಸ್ ಧರಿಸುವುದರಿಂದ ಮಕ್ಕಳು ನಪುಂಸಕರಾಗಿ, ಆಟಿಸಂ ಕಾಯಿಲೆಯಿಂದ ಜನಿಸುತ್ತಾರೆ: ಶಿಕ್ಷಕರೊಬ್ಬರ ಅವೈಜ್ನಾನಿಕ ಹೇಳಿಕೆ

ತಿರುವನಂತಪುರ;ಏ-4: ಮಹಿಳೆಯರು ಜೀನ್ಸ್ ಧರಿಸುವುದರಿಂದ ಮಕ್ಕಳು ನಪುಂಸಕರಾಗಿ ಹಾಗೂ ಆಟಿಸಂ ಕಾಯಿಲೆಯಿಂದ ಜನಿಸುತ್ತಿದ್ದಾರೆ ಎಂದು ಕೇರಳದ ಶಿಕ್ಷಕರೊಬ್ಬರು ಹೇಳಿಕೆ ನೀಡಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಕಾಲಡಿಯ ಸರ್ಕಾರಿ ಕಾಲೇಜ್ ವೊಂದರಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ರಜಿತ್ ಕುಮಾರ್ ಎಂಬುವವರು ಇಂಥದ್ದೊಂದು ಹೇಳಿಕೆ ನೀಡಿದ್ದು, ಶಿಕ್ಷಕನ ಈ ಅವೈಜ್ನಾನಿಕ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಭೆಯೊಂದರಲ್ಲಿ ಮಕ್ಕಳು ನಪುಂಸಕರಾಗಿ ಹಾಗೂ ಆಟಿಸಂ ಕಾಯಿಲೆಯಿಂದ ಏಕೆ ಜನಿಸುತ್ತಾರೆಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಪೋಷಕರ ವಿರುದ್ಧ ವರ್ತನೆಯಿಂದಾಗಿ ಮಕ್ಕಳು ಸ್ವಲೀನತೆಗೆ ಗುರಿಯಾಗುತ್ತಿದ್ದಾರೆ. ಮಹಿಳೆ ತನ್ನ ಹೆಣ್ತನವನ್ನು ಮರೆತರೆ ಅಥವಾ ಕಡೆಗಣಿಸಿದರೆ, ಪುರುಷ ಪುರುಷತ್ವವನ್ನು ಮರೆತರೆ ಅವರಿಗೆ ಹುಟ್ಟುವ ಹೆಣ್ಣು ಮಗು ಗಂಡಿನ ಗುಣಲಕ್ಷಣ ಹೊಂದಿರುತ್ತದೆ, ಇಲ್ಲದೆ ಹೋದರೆ ನಪುಂಸಕನಾಗುತ್ತದೆ ಎಂದು ವಿವರಿಸಿದ್ದಾರೆ.

ರಜಿತ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೇರಳ ರಾಜ್ಯ ಶಿಕ್ಷಣ ಸಚಿವೆ ಕೆ.ಕೆ. ಶೈಲಜಾ ಅವರು, ಎಲ್ಲಾ ಸರ್ಕಾರಿ ಇಲಾಖೆಗಳು ಹಾಗೂ ಸಂಸ್ಥೆಗಳು ತಮ್ಮ ಕಾರ್ಯಕ್ರಮಕ್ಕೆ ರಜಿತ್ ಅವರನ್ನು ಆಹ್ವಾನಿಸಿದ್ದರೆ, ಅದನ್ನು ತಡೆಹಿಡಿಯಬೇಕು ಎಂದು ಸೂಚಿಸಿದ್ದಾರೆ.

Women Wearing Jeans,Transgender Kids Are Born, Kerala Teacher

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ