ಮನೆ ಸಮೀಪದ ಅಂಗಡಿಗೆ ಹೋಗಿ ಮಹಿಳೆ ಹಿಂದಿರುಗುತ್ತಿದ್ದಾಗ ಬೈಕ್‍ನಲ್ಲಿ ಹಿಂಬಾಲಿಸಿದ ಸರಗಳ್ಳರು 32 ಗ್ರಾಂ ಸರ ಎಗರಸಿರುವ ಘಟನೆ

ಬೆಂಗಳೂರು,ಏ.4- ಮನೆ ಸಮೀಪದ ಅಂಗಡಿಗೆ ಹೋಗಿ ಮಹಿಳೆ ಹಿಂದಿರುಗುತ್ತಿದ್ದಾಗ ಬೈಕ್‍ನಲ್ಲಿ ಹಿಂಬಾಲಿಸಿದ ಸರಗಳ್ಳರು 32 ಗ್ರಾಂ ಸರ ಎಗರಸಿರುವ ಘಟನೆ ಹುಳಿಮಾವು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಚ್ ಮಾರ್ಕ್ ಅಪಾರ್ಟ್‍ಮೆಂಟ್ ನಿವಾಸಿ ಕಲ್ಪನಾ ಎಂಬುವರು ರಾತ್ರಿ 9.30ರಲ್ಲಿ ಕೊಪ್ಪ -ಬೇಗೂರು ರಸ್ತೆಯಲ್ಲಿ ಅಂಗಡಿಗೆ ಹೋಗಿ ಮನೆಗೆ ಹಿಂದಿರುಗುತ್ತಿದ್ದಾಗ ಹಿಂಬಾಲಿಸಿ ಬಂದ ಸರಗಳ್ಳರು ಇವರ ಕೊರಳಲ್ಲಿದ್ದ 32 ಗ್ರಾಂ ಸರ ಎಗರಿಸಿದ್ದು , ಇದರ ಮೌಲ್ಯ 90 ಸಾವಿರ ಎಂದು ಅಂದಾಜಿಸಲಾಗಿದೆ.

ಸಹಾಯಕ್ಕಾಗಿ ಕೂಗಿಕೊಳ್ಳುವಷ್ಟರಲ್ಲಿ ಸರಗಳ್ಳರು ನಾಪತ್ತೆಯಾಗಿದ್ದರು. ಈ ಸಂಬಂಧ ಹುಳಿಮಾವು ಠಾಣೆ ಪೆÇಲೀಸರಿಗೆ ದೂರು ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ