ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ ಎರಡೂವರೆ ಲಕ್ಷ ರೂ. ಹಣ ಮತ್ತು ಡಿಟರ್ಜೆಂಟ್ ಪೌಡರ್ ತುಂಬಿದ ಒಂದು ಗೂಡ್ಸ್ ವಾಹನ ವಶಕ್ಕೆ:

ಮಂಡ್ಯ, ಏ.3-ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ ಎರಡೂವರೆ ಲಕ್ಷ ರೂ. ಹಣ ಮತ್ತು ಡಿಟರ್ಜೆಂಟ್ ಪೌಡರ್ ತುಂಬಿದ ಒಂದು ಗೂಡ್ಸ್ ವಾಹನವನ್ನು ನಗುವಿನಹಳ್ಳಿ ಗೇಟ್ ಚೆಕ್‍ಪೆÇೀಸ್ಟ್‍ನಲ್ಲಿ ಪೆÇಲೀಸರು ವಶಪಡಿಸಿಕೊಂಡಿರುವ ಘಟನೆ ನಿನ್ನೆ ಸಂಜೆ ನಡೆದಿದೆ.
ಕಾರಿನಲ್ಲಿದ್ದ ಎರಡೂವರೆ ಲಕ್ಷ ರೂ. ನಗದು ಮತ್ತದರ ಚಾಲಕ ಹಾಗೂ ಖಾಸಗಿ ಕಂಪೆನಿಯ ಒಂದು ಲೋಡ್ ಡಿಟರ್ಜೆಂಟ್ ಪೌಡರ್ ತುಂಬಿದ್ದ ವಾಹನ, ಚಾಲಕ ಮತ್ತು ನಿರ್ವಾಹಕನನ್ನು ಪೆÇಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮಗಳನ್ನು ತಡೆಯಲು ಚುನಾವಣಾ ಆಯೋಗ ಕಟ್ಟುನಟ್ಟಿನ ಕ್ರಮಕೈಗೊಳ್ಳಲು ಆದೇಶಿಸಿದ್ದು, ಅದರಂತೆ ಪ್ರತಿ ವಾಹನದ ಮೇಲೂ ಹದ್ದಿನ ಕಣ್ಣಿಟ್ಟಿರುವ ಪೆÇಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ