ರಸ್ತೆ ಅಪಘಾತಗಳಿಂದಾಗಿ ಶೇ.20ರಷ್ಟು ಜನ ಬಲಿ

ಬೆಂಗಳೂರು, ಏ.3-ರಸ್ತೆ ಅಪಘಾತಗಳಿಂದಾಗಿ ಶೇ.20ರಷ್ಟು ಜನ ಸಾವನ್ನಪ್ಪುತ್ತಿದ್ದು, ರಸ್ತೆಗಳಲ್ಲಿ ಪ್ರತಿ ಎರಡು ನಿಮಿಷಕ್ಕೊಮ್ಮೆ ಅಪಘಾತಗಳು ಸಂಭವಿಸುತ್ತವೆ ಹಾಗೂ ಪ್ರತಿ ಎಂಟು ನಿಮಿಷಕ್ಕೊಬ್ಬ ವ್ಯಕ್ತಿ ಸಾವನ್ನಪ್ಪುತ್ತಾನೆ. ರಕ್ತಸ್ರಾವ ಬಗ್ಗೆ ಸೂಕ್ತ ಮಾಹಿತಿ ಇದ್ದರೆ ಪ್ರತಿ ವರ್ಷ ಲಕ್ಷಾಂತರ ಜೀವಗಳನ್ನು ಉಳಿಸಬಹುದು.

ಈ ಗಂಭೀರ ಸಮಸ್ಯೆಯನ್ನು ಬಗೆಹರಿಸಲು, ಗಾಯ ಗುಣಪಡಿಸಲು ಯುಎಸ್‍ಎಫ್‍ಡಿಎಗೆ ಒಪ್ಪಿಗೆ ಪಡೆದ ಭಾರತ ಮೊದಲ ಸಂಸ್ಥೆ ಅಕ್ಸಿಯೋ ಬಯೋಸೊಲ್ಯೂಶನ್ ಮುಂದಾಗಿದ್ದು ರಕ್ತಸ್ರಾವ ದಿನ ಆಚರಿಸುತ್ತಿದೆ.

ಬೆಂಗಳೂರು ಮೂಲದ ಮೆಡಿಟೆಕ್ ಸಂಸ್ಥೆ ಈ ಕುರಿತು ಜಾಗೃತಿ ಮೂಡಿಸಲು ಹಾಗೂ ತರಬೇತಿ ನೀಡಲು ನಿರ್ಧರಿಸಿದೆ. ಇದರ ಭಾಗವಾಗಿ ಅಕ್ಸಿಯೋ ಬಯೋಸೊಲ್ಯೂಷನ್ ದೆಹಲಿಯ ಎಐಐಎಂಎಸ್, ಅಹಮದಬಾದಿನ ಝೈಡಸï, ಕೋಲ್ಕತ್ತಾದ ಅಪೆÇಲೊ ಗ್ಲೆನೆಗಲ್ಸï ಅಸ್ಪತ್ರೆ, ಹೈದರಾಬಾದï ನ ಕಾಮಿನೆನಿ ಆಸ್ಪತ್ರೆ, ಬೆಂಗಳೂರಿನ ಮಣಿಪಾಲ ಆಸ್ಪತ್ರೆ ಹಾಗೂ ಕೊಲಂಬಿಯಾ ಏಷ್ಯಾ ಅಸ್ಪತ್ರೆಯ ಸೇರಿದಂತೆ ಭಾರತದಾದ್ಯಂತ ಹಲವು ಪ್ರಮುಖ ಆಸ್ಪತ್ರೆಗಳೊಂದಿಗೆ ಸಹಭಾಗಿತ್ವ ಹೊಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ