ಅಪ್ರಾಪ್ತ ಪುತ್ರಿಯ ಮದುವೆ : ಸಾಮೂಹಿಕ ಕಗ್ಗೊಲೆ

ಜೆಮ್‍ಶೆಡ್ಪುರ್, ಏ.3-ವಿವಾಹಿತ ವ್ಯಕ್ತಿಯೊಬ್ಬನಿಗೆ ತಮ್ಮ ಅಪ್ರಾಪ್ತ ಪುತ್ರಿಯನ್ನು ಮದುವೆ ಮಾಡಿಕೊಡಲು ನಿರಾಕರಿಸಿದ್ದಾಗಿ ದಂಪತಿ ಮತ್ತು ಅವರ ಮೂವರು ಮಕ್ಕಳನ್ನು ಕೊಚ್ಚಿ ಕೊಂದಿರುವ ಭೀಕರ ಘಟನೆ ಜಾರ್ಖಂಡ್‍ನ ಪಶ್ಚಿಮ ಸಿಂಗ್‍ಭೂಮ್ ಜಿಲ್ಲೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಅವರ ಕೊಳೆತ ಶವಗಳು ಹತ್ತಿರದ ಅರಣ್ಯದಲ್ಲಿ ಪತ್ತೆಯಾಗಿದೆ.
ರಾಮ್ ಸಿಂಗ್ ಸಿರ್ಕಾ, ಅವರ ಪತ್ನಿ ಪನು ಕುಯಿ, ಪುತ್ರಿ ರಂಭಾ(17), ಹಾಗೂ ಮಕ್ಕಳಾದ ಕಂಡೆ(12) ಮತ್ತು ಸೋನ್ಯ(8) ಇವರನ್ನು ದುಷ್ಕರ್ಮಿಗಳು ಮಾರ್ಚ್ 14ರಂದು ಹರಿತವಾದ ಆಯುಧಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ ಎಂದು ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ತೌಕೀರ್ ಅಲಂ ಹೇಳಿದ್ದಾರೆ.
ಸಾಮೂಹಿಕ ಕಗ್ಗೊಲೆ ಸಂಬಂಧ 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಇವರಲ್ಲಿ ನಾಲ್ವರು ಈ ಪ್ರದೇಶದ ಪ್ರಭಾವಿ ಕುಟುಂಬಕ್ಕೆ ಸೇರಿದವರೆಂದು ಪೆÇಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಒಬ್ಬನನ್ನು ಬಂಧಿಸಿದ್ದು, ಪರಾರಿಯಾಗಿರುವ ಉಳಿದವರಿಗಾಗಿ ಪೆÇಲೀಸರು ಶೋಧ ಮುಂದುವರಿಸಿದ್ದಾರೆ.
ಮಾರ್ಚ್ 27ರಂದು ಗುವಾ ಪೆÇಲೀಸ್ ಠಾಣೆ ವ್ಯಾಪ್ತಿಯ ತುಲಸೈ ಗ್ರಾಮದ ಅರಣ್ಯ ಪ್ರದೇಶಗಳ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಇವರ ಕೊಳೆತ ಶವಗಳು ಪತ್ತೆಯಾಗಿವೆ.
ಪ್ರಭಾವಿ ಮನೆತನದಲ್ಲಿ ವಿವಾಹಿತ ವ್ಯಕ್ತಿಯೊಬ್ಬ ಅಪ್ರಾಪ್ತ ರಂಭಾಳನ್ನು ಮದುವೆಯಾಗಲು ರಾಮ್‍ಸಿಂಗ್ ಅವರನ್ನು ಒತ್ತಾಯಿಸುತ್ತಿದ್ದ. ಆತನಿಗೆ ತಮ್ಮ ಪುತ್ರಿಯನ್ನು ವಿವಾಹ ಮಾಡಿಕೊಡಲು ದಂಪತಿ ನಿರಾಕರಿಸಿದ್ದರಿಂದ ಕುಪಿತಗೊಂಡು ಇಡೀ ಕುಟುಂಬವನ್ನು ಸರ್ವನಾಶ ಮಾಡಿದ್ದಾರೆ. ಈ ಘಟನೆನಿಂದ ಗ್ರಾಮ ಮತ್ತು ಸುತ್ತಮುತ್ತಲ ಪ್ರದೇಶಗಳ ಜನರು ಬೆಚ್ಚಿಬಿದ್ದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ