ಬೆಂಗಳೂರು, ಏ.3- ವಾಹನಗಳನ್ನು ನಡುರಸ್ತೆಯಲ್ಲಿ ತಡೆಯುವುದನ್ನು ಬಿಟ್ಟು ನಿಯಮಾನುಸಾರ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಂದ ಮುನ್ಸೂಚನೆ ನೀಡಿ ಪಡೆಯಬೇಕೆಂದು ರಾಜ್ಯಸರ್ಕಾರ ಹಾಗೂ ಸ್ವಾಮ್ಯ ಸಂಘ ಸಂಸ್ಥೆಗಳ ವಾಹನ ಚಾಲಕರ ಒಕ್ಕೂಟದ ಅಧ್ಯಕ್ಷ ಎಂ.ಎನ್.ವೇಣುಗೋಪಾಲ್ ಒತ್ತಾಯಿಸಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಇರುವುದರಿಂದ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ನೀತಿ ನಿಯಮಗಳನ್ನು ಉಲ್ಲಂಘಿಸಿ ಸರ್ಕಾರ ಹಾಗೂ ಸರ್ಕಾರದ ಅಧೀನದಲ್ಲಿನ ನಿಗಮ, ಮಂಡಳಿ, ಕಾಪೆರ್Çೀರೇಷನ್ ಮತ್ತು ಸ್ವಾಯತ್ತ ಸಂಸ್ಥೆಗಳ ವಾಹನ ಚಾಲಕರನ್ನು ಚುನಾವಣಾ ಕೆಲಸಕ್ಕೆ ನಡುರಸ್ತೆಯಲ್ಲೇ ವಾಹನಗಳನ್ನು ತಡೆದು ಚಾಲಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ದೂರಿದ್ದಾರೆ.
ನಾವು ಸರ್ಕಾರದ ನೌಕರರು. ಸರ್ಕಾರ ಹಾಗೂ ಸಾರ್ವಜನಿಕರ ಸೇವೆಯಲ್ಲಿ ತೊಡಗುವುದು ನಮ್ಮ ಆದ್ಯ ಕರ್ತವ್ಯ. ನೀತಿ-ನಿಯಮಾನುಸಾರ ಚುನಾವಣಾ ಸಂದರ್ಭದಲ್ಲಿ ಮುನ್ಸೂಚನೆ ನೀಡಿ ಚುನಾವಣಾ ಕೆಲಸಕ್ಕೆಂದು ಕಳುಹಿಸುತ್ತಿರುವುದು ನ್ಯಾಯಬದ್ಧವಾಗಿದೆ. ಆದರೆ ನಮ್ಮ ವಾಹನ ಚಾಲಕರಿಗೆ ಇದ್ಯಾವುದನ್ನೂ ಪಾಲಿಸದೆ ನಡುರಸ್ತೆಯಲ್ಲಿ ಸಾರಿಗೆ ಹಾಗೂಪೆÇಲೀಸ್ ಅಧಿಕಾರಿಗಳು ವಾಹನಗಳನ್ನು ತಡೆದು ಅವಮಾನಿಸುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದರು.
ಚುನಾವಣಾ ಅಧಿಕಾರಿಗಳು ನೀತಿ ನಿಯಮಗಳನ್ನು ಗಾಳಿಗೆ ತೂರಿ ನೀತಿ ಸಂಹಿತೆ ಉಲ್ಲಂಘಿಸಿರುವ ಕಾರಣ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ಕುಮಾರ್ ಅವರ ವಿರುದ್ಧ ಹಲಸೂರು ಗೇಟ್ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಒಂದು ವೇಳೆ ವಾಹನಗಳನ್ನು ತಡೆಯುವುದು ಬಿಟ್ಟು ನಿಯಮಾನುಸಾರ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಂದ ಮುನ್ಸೂಚನೆ ನೀಡಿ ವಾಹನಗಳನ್ನು ಪಡೆಯುತ್ತೇವೆ ಎಂದು ನಮ್ಮ ಒಕ್ಕೂಟಕ್ಕೆ ಲಿಖಿತಪೂರ್ವಕವಾಗಿ ತಿಳಿಸಿದಲ್ಲಿ ಪೆÇಲೀಸ್ ಠಾಣೆಯಲ್ಲಿ ನೀಡಿರುವ ದೂರು ಹಿಂಪಡೆಯುತ್ತೇವೆ ಎಂದು ಎಂ.ಎನ್.ವೇಣುಗೋಪಾಲ್ ತಿಳಿಸಿದ್ದಾರೆ.