ಸಮುದಾಯ ಸೇವೆಯ ಕ್ಷೇತ್ರದಲ್ಲಿನ ಅಸಾಮಾನ್ಯ ಸಾಧನೆಗಳಿಗಾಗಿ 29 ಶಾಲಾ ವಿದ್ಯಾರ್ಥಿಗಳಿಗೆ ಸನ್ಮಾನ

 

ಬೆಂಗಳೂರು, ಏ.3- ಡಿಎಚ್‍ಎಫ್‍ಎಲ್ ಪ್ರಮೆರಿಕ ಲೈಫ್ ಇನ್ಷುರೆನ್ಸ್ (ಡಿಪಿಎಲ್‍ಐ) ಆಯೋಜಿಸಿದ್ದ 8ನೆ ವಾರ್ಷಿಕ ಪ್ರಮೆರಿಕ ಸ್ಪಿರಿಟ್ ಆಫ್ ಕಮ್ಯುನಿಟಿ ಅವಾಡ್ಸರ್ï (ಎಸ್‍ಓಸಿಎ) ಗುರು ಗ್ರಾಮದಲ್ಲಿ ನಡೆದ ಸಮಾರಂಭವೊಂದರಲ್ಲಿ ಸಮುದಾಯ ಸೇವೆಯ ಕ್ಷೇತ್ರದಲ್ಲಿ ಅವರ ಅಸಾಮಾನ್ಯ ಸಾಧನೆಗಳಿಗಾಗಿ 29 ಶಾಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಿತು.

ರಾಷ್ಟ್ರದ ಅಗ್ರ ವಿದ್ಯಾರ್ಥಿ ಸ್ವಯಂ ಸೇವಕರಿಗಾಗಿ ರಾಷ್ಟ್ರವ್ಯಾಪಿ ಹುಡುಕಾಟದಲ್ಲಿ ದೊರಕಿದ 4000ಕ್ಕಿಂತಲೂ ಹೆಚ್ಚಿನ ಅರ್ಜಿಗಳಿಂದ ಈ ಫೈನಲಿ¸್ಟïಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ರಾಯಭಾರಿ, ಒಲಂಪಿಕ್ ಪದಕ ವಿಜೇತೆ ಮತ್ತು ಮಾಜಿ ನಂ.1 ವಿಶ್ವ ಬ್ಯಾಡ್ಮಿಂಟನ್ ಆಟಗಾರ್ತಿಯಾದ ಸೈನಾ ನೆಹ್ವಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

2010ರಲ್ಲಿ ಪರಿಚಯಿಸಲ್ಪಟ್ಟ ಈ ಪ್ರತಿಷ್ಠಿತ ಪ್ರಶಸ್ತಿ ಕಾರ್ಯಕ್ರಮವು ಸ್ಪಿರಿಟ್ ಆಫ್ ಕಮ್ಯುನಿಟಿ ಪ್ರಶಸ್ತಿಗಳ ಭಾರತ ಆವೃತ್ತಿಯಾಗಿದೆ, ಹಾಗೂ ಇದು ಸ್ವಯಂ ಸೇವಕ ಸೇವೆಯನ್ನು ಮಾತ್ರವೇ ಆಧರಿಸಿದ ಯುನೈಟೆಡ್ ಸ್ಟೇಟ್ಸ್‍ನ ಅತಿ ದೊಡ್ಡ ಯುವ ಮಾನ್ಯತಾ ಕಾರ್ಯಕ್ರಮವಾಗಿದೆ.
8ನೇ ವಾರ್ಷಿಕ ಪ್ರಾಮರಿಕ ಸ್ಪಿರಿಟ್ ಆಫ್ ಕಮ್ಯೂನಿಟಿ ಪ್ರಶಸ್ತಿಗಳ ಅಂತಿಮ ವಿಭಾಗದಲ್ಲಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳಾದ ಮಲ್ಯ ಅದಿತಿ ಇಂಟರ್‍ನ್ಯಾಷನಲ್ ಸ್ಕೂಲ್ ಒಂಬತ್ತನೆ ವರ್ಗದ ವಿದ್ಯಾಥಿಯಾದ ಆದ್ಯ ಮೆಂಡಾ ಹಾಗೂ ವಿದ್ಯಾನಿಕೇತನ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಯಾದ ಗಾಯತ್ರಿ ಖುರಾನಾ ಅವರನ್ನು ಫೈನಲಿ¸್ಟïಗಳೆಂದು ಘೋಷಿಸಲಾಯಿತು.

ಈ ಎಲ್ಲ ವಿದ್ಯಾರ್ಥಿಗಳು ತಮ್ಮ ಪ್ರಯತ್ನದ ಮೂಲಕ ತಮ್ಮ ಸಮುದಾಯಕ್ಕೆ ಅನನ್ಯ ರೀತಿಯಲ್ಲಿ ಕೊಡುಗೆ ನೀಡಿದರು. ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಮನೆಗಳನ್ನು ಕಟ್ಟಲು ಸಹಾಯ ಮಾಡಲು ಆದ್ಯಾ ಮೆಂಡಾ ಒಂದು ಸಾಮಾಜಿಕ ಉದ್ಯಮವಾದ ವಿರೈಸ್ ಅನ್ನು ರಚಿಸಿದ್ದಾರೆ.

2016ರಲ್ಲಿ ಸ್ಥಾಪನೆಯಾದ ವೀರೈಸ್ ವಸತಿ ಸಮಸ್ಯೆಗಳಿಗೆ ಒಂದು ಪರಿಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ, ಹಾಗೂ ಇದು ಭೂಮಿಯನ್ನು ಹೊಂದಿದ, ಆದರೆ ಮನೆಗಳನ್ನು ನಿರ್ಮಿಸಲು ಹಣಕಾಸಿನ ಸಂಪನ್ಮೂಲಗಳು ಮತ್ತು ತಮ್ಮ ತಾಂತ್ರಿಕ e್ಞÁನವನ್ನು ಹೊಂದಿರದ ದುರ್ಬಲ ಸಮುದಾಯಗಳ ವ್ಯಕ್ತಿಗಳನ್ನು ಗುರಿಯಾಗಿಸಿದೆ. ಸಾಮಾಜಿಕ ಉದ್ಯಮವು ಒಂದು ಆರೋಹಣೀಯ ಮತ್ತು ಸಮರ್ಥನೀಯ ಮಾದರಿಯಾಗಿದ್ದು, ಇದರಿಂದ ಧನಾತ್ಮಕ ಸಾಮಾಜಿಕ ಬದಲಾವಣೆಯನ್ನು ರಚಿಸಲು ಹೆಚ್ಚು ಹಳ್ಳಿಗಳನ್ನು ಒಳಗೊಳ್ಳಲು ಆದ್ಯಾ ಯೋಜಿಸುತ್ತಿದ್ದಾರೆ.

ಗಾಯತ್ರಿ ಖುರಾನಾ ಯುಕ್ಸಾಮ್ ಸಿಕ್ಕಿಂನಲ್ಲಿನ ಪ್ರಾಥಮಿಕ ಶಾಲೆಗಾಗಿ ಗ್ರಂಥಾಲಯವನ್ನು ಸ್ಥಾಪಿಸಲು ಅನುಕೂಲವಾಗುವಂತೆ ನಿಸ್ವಾರ್ಥ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ನೆರೆಹೊರೆಯಲ್ಲಿ ಹಲವಾರು ಕಟ್ಟಡಗಳಲ್ಲಿ ಜೂನಿರ್ಯ ಗುಂಪುಗಳನ್ನು ಸ್ಥಾಪಿಸಿದರು ಮತ್ತು ಈ ಗುಂಪುಗಳು ಗ್ರಂಥಾಲಯವನ್ನು ಸ್ಥಾಪಿಸಲು ವಾರದ ಅರ್ಧ ಗಂಟೆಯ ಕಾಲ ಕಳೆಯಲು ಸಹಾಯವಾಗುವಂತೆ ತಂಡಗಳನ್ನು ಸ್ಥಾಪಿಸಲು ಪ್ರೇರೇಪಿಸಿದರು.

ಲೈಬ್ರರಿಗೆ ಸಹಾಯ ಮಾಡುವ ಜೊತೆಗೆ, ಈ ಪುಟ್ಟ ಬಾಲಕಿ ಮರು ಬಳಕೆ ಮಾಡಬಹುದಾದ ಕಾಗದದ ಚೀಲಗಳನ್ನು ಮಾಡಿ ಅದನ್ನು ತರಕಾರಿ ಮತ್ತು ಹಣ್ಣಿನ ಮಾರಾಟಗಾರರಿಗೆ ಉಚಿತವಾಗಿ ವಿತರಿಸುತ್ತಾಳೆ. ಜೊತೆಗೆ ಅವರು ಸಂಗ್ರಹಣೆಗಾಗಿ ಮರು ಬಳಕೆಯ ರಬ್ಬರ್ನಿಂದ ಲೂಮ್ ಬ್ಯಾಂಡ್ಗಳನ್ನು ತಯಾರಿಸುತ್ತಾರೆ ಮತ್ತು ಸಮುದಾಯದ ಕಾರ್ಯಕ್ರಮಗಳಲ್ಲಿ ಮತ್ತು ಅವರ ನೆರೆಹೊರೆಯವರ ಮತ್ತು ಕುಟುಂಬದ ಸ್ನೇಹಿತರಿಗೆ ಅದನ್ನು ಮಾರಾಟ ಮಾಡುತ್ತಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ