ಬೆಂಗಳೂರು, ಏ.2- ನಗರ ವ್ಯಾಪ್ತಿಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ಜಿಲ್ಲಾಧಿಕಾರಿ ದಯಾನಂದ್ ಅವರು ಹಲವೆಡೆ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿ ನಂ. 080-22211157/22240614, ಟೋಲ್ಫ್ರೀ ನಂ.118004250138 ಹಾಗೂ ವಾಟ್ಸಾಪ್ ನಂ.8861162910 ಆಗಿದ್ದು, ಸಿದ್ದರಾಜು ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.
ಯಲಹಂಕ ನಿಯಂತ್ರಣ ಕೊಠಡಿ ಸಂಖ್ಯೆ080-28560696 ಆಗಿದ್ದು, ಚಂದ್ರಶೇಖರ್ ನೋಡಲ್ ಅಧಿಕಾರಿಯಾಗಿದ್ದಾರೆ.
ಬ್ಯಾಟರಾಯನಪುರದಲ್ಲಿ ಶಿವಗೌಡ ನೋಡಲ್ ಅಧಿಕಾರಿಯಾಗಿದ್ದು, 080-22975936/23636671/9480685227 ನಿಯಂತ್ರಣ ಕೊಠಡಿ ಸಂಖ್ಯೆಗಳಾಗಿವೆ.
ಯಶವಂತಪುರಕ್ಕೆ 9036906776/7259659338, ದಾಸರಹಳ್ಳಿಗೆ 080-28394909, ಮಹದೇವಪುರಕ್ಕೆ 080-25619385/8147901703, ಬೆಂಗಳೂರು ದಕ್ಷಿಣಕ್ಕೆ 080-22223152 ಹಾಗೂ ಆನೇಕಲ್ಗೆ 9964155702 ನಂಬರ್ ಆಗಿದ್ದು, ಕ್ರಮವಾಗಿ ಅನಿಲ್ಕುಮಾರ್, ಮಹೇಶ್, ಮನೋಹರ್, ಜನಾರ್ದನ್ ಹಾಗೂ ಶಬನಾ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.