ಸಿಬಿಎಸ್‍ಇ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆ: ಮಧ್ಯಪ್ರದೇಶದಲ್ಲಿ ಮತ್ತೊಂದು ಪ್ರಕರಣ

ಭೋಪಾಲ್, ಏ.2-ಸಿಬಿಎಸ್‍ಇ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿ ದೇಶಾದ್ಯಂತ ವಿವಾದ ಸೃಷ್ಟಿಯಾಗಿರುವಾಗಲೇ ಮಧ್ಯಪ್ರದೇಶದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ವಾಚ್‍ಮನ್ (ಕಾವಲುಗಾರ) ಹುದ್ದೆಗಾಗಿ ಭಾರತ ಆಹಾರ ನಿಗಮ(ಎಫ್‍ಸಿಐ)ದ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಆರೋಪದ ಮೇಲೆ ಮಧ್ಯಪ್ರದೇಶದ ವಿಶೇಷ ಕಾರ್ಯಪಡೆ(ಎಸ್‍ಟಿಎಫ್) ಅಧಿಕಾರಿಗಳು ಗ್ವಾಲಿಯಾರ್‍ನ 48 ಅಭ್ಯರ್ಥಿಗಳು ಮತ್ತು ದೆಹಲಿ ಮೂಲದ ಇಬ್ಬರು ಮಧ್ಯವರ್ತಿಗಳನ್ನು ಬಂಧಿಸಿದ್ದಾರೆ.
ಮಧ್ಯಪ್ರದೇಶದ ವಿವಿಧ ಕೇಂದ್ರಗಳಲ್ಲಿ ನಿನ್ನೆ ವಾಚ್‍ಮನ್ ಹುದ್ದೆಗಾಗಿ ಎಫ್‍ಸಿಐ ಪರೀಕ್ಷೆಗಳು ನಡೆಯಬೇಕಿತ್ತು. ಪ್ರಶ್ನೆ ಪತ್ರಿಕೆ ಮತ್ತು ಹುದ್ದೆಗಾಗಿ ಅಕಾಂಕ್ಷಿಗಳಿಂದ ತಲಾ ಐದು ಲಕ್ಷ ರೂ.ಗಳಿಗೆ ಬೇಡಿಕೆ ಇಡಲಾಗಿತ್ತು ಎಂದು ಎಸ್‍ಟಿಎಫ್ ಅಧಿಕಾರಿಗಳು ತಿಳಿಸಿದ್ಧಾರೆ.
ಖಿಚಿತ ಸುಳಿವಿನ ಮೇರೆಗೆ ಗ್ವಾಲಿಯಾರ್‍ನ ಸಿದ್ದಾರ್ಥ್ ಪ್ಯಾಲೇಸ್ ಹೋಟೆಲ್ ಮೇಲೆ ದಾಳಿ ನಡೆಸಿದ ಎಸ್‍ಐಟಿ ಅಧಿಕಾರಿಗಳು ಅಶುತೋಷ್ ಕುಮಾರ್ ಮತ್ತು ಹರೀಶ್ ಕುಮಾರ್ ಎಂಬ ಏಜೆಂಟರನ್ನು ಬಂಧಿಸಿದರು. ಅವರು ನೀಡಿದ ಮಾಹಿತಿ ಆಧರಿಸಿ 48 ಅಭ್ಯರ್ಥಿಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ