ಬೆಂಗಳೂರು;ಏ-1: ರಾಜಧಾನಿ ಬೆಂಗಳೂರುನಲ್ಲಿ ರೌಡಿಗಳ ಅಟ್ಟಹಾಸವನ್ನು ಮಟ್ಟಹಾಕಲು ಮತ್ತೆ ಕಾರ್ಯಾಚರಣೆಗಿಳಿದಿದ್ದು, ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ರೌಡಿ ಶೀಟರ್ ಗಳಿಬ್ಬರ ಮೇಲೆ ಪೊಲೀಸರು ಆತ್ಮರಕ್ಷಣೆಗಾಗಿ ಗಂಡಿನದಾಳಿ ನಡೆಸಿದ್ದಾರೆ.
ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ಗಳನ್ನು ಬಂಧಿಸಲು ತೆರಳಿದಾಗ ರೌಡಿಗಳು ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದಾರೆ ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ರೌಡಿಗಳ ಮೇಲೆ ಶೂಟೌಟ್ ಮಾಡಿದ್ದಾರೆ.
ಕೊಲೆ ಕೇಸ್ ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಪರಮೇಶ್ ಹಾಗೂ ಅವನ ಸಹಚರ ಸಂತೋಷ್ ನನ್ನು ಪೊಲೀಸರು ಬಂಧಿಸಲೆಂದು ತಡರಾತ್ರಿ ಬನಶಂಕರಿಯ ಚಿಕ್ಕೇಗೌಡನ ಪಾಳ್ಯಕ್ಕೆ ತೆರಳಿದ್ದ ವೇಳೆ
ಪಿಸ್ತೂಲ್ನಿಂದ ಪೊಲೀಸರ ಮೇಲೆ ಫೈರಿಂಗ್ ಮಾಡಲು ಯತ್ನಿಸಿದ್ದಾರೆ. ಅಲ್ಲದೆ, ಹೆಡ್ ಕಾನ್ಸ್ಟೆಬಲ್ ಸುರೇಶ್, ಪೇದೆ ನೇಮಿನಾಥ್ ಮೇಲೆ ರೌಡಿಶೀಟರ್ಗಳು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಆತ್ಮರಕ್ಷಣೆಗೆ ರೌಡಿಶೀಟರ್ಗಳ ಮೇಲೆ ಇನ್ಸ್ಪೆಕ್ಟರ್ ಶಿವಸ್ವಾಮಿ, ಎಸ್ಐ ಶಿವಕುಮಾರ್ ಏರ್ ಫೈರ್ ಮಾಡಿದ್ದಾರೆ. ರೌಡಿಶೀಟರ್ಗಳ ಕಾಲಿಗೆ ಗುಂಡು ತಗುಲಿದ್ದು, ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಕುರಿತು ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ ಮಾಹಿತಿ ನೀಡಿದ್ದಾರೆ.
Firing,Rowdy sheeter,Shoot out,Thalaghatpura police