2019 ಮಾರ್ಚ್ ವರೆಗೂ ಉಚಿತ !

ಮುಂಬೈ: ದೂರಸಂಪರ್ಕ ವಲಯದಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್‌‌ ಜಿಯೋ ತನ್ನ ಪ್ರೈಮ್ ಗ್ರಾಹಕರ ಮೆಂಬರ್‌ಶಿಪ್ ಸೇವೆಯನ್ನು ಮುಂದಿನ ಒಂದು ವರ್ಷಗಳ ಕಾಲ ವಿಸ್ತರಿಸಿದೆ. ಅಂದರೆ 2019ರ ವರೆಗೂ ಉಚಿತ.
ಗ್ರಾಹಕರ ಪ್ರೈಮ್‌ ಮೆಂಬರ್‌ಶಿಪ್‌ ಸೇವೆ ಇಂದು ಸಂಜೆ ಮುಕ್ತಾಯಗೊಳ್ಳಲಿದ್ದು, ಇದಕ್ಕೂ ಒಂದು ದಿನ ಮುನ್ನವೇ ಶುಕ್ರವಾರ ಸಂಜೆ ರಿಲಯನ್ಸ್‌‌ ಈ ಸೇವೆಯ ಘೋಷಣೆ ಮಾಡಿದೆ.
ಯಾವುದೇ ಹೆಚ್ಚುವರಿ ಶುಲ್ಕದ ಪಾವತಿ ಇಲ್ಲದೆ ಈ ಸೇವೆಯನ್ನು ನೀಡಲಾಗುತ್ತಿದೆ ಎಂದು ಕಂಪನಿ ತಿಳಿಸಿದ್ದು, ಈ ಮೂಲಕ ಪ್ರೈಮ್ ಗ್ರಾಹಕರಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಜಿಯೋ ಆ್ಯಪ್‌ನಲ್ಲಿ ಸಮಗ್ರ ಮಾಹಿತಿ ನೀಡಲಾಗಿದೆ ಎಂದು ಕಂಪನಿ ತಿಳಿಸಿದೆ.
ಪ್ರಸ್ತುತ 19 ರೂ.ಗಳಿಂದ ಹಿಡಿದು 9,999 ರೂ.ಗಳ ವರೆಗೆ ಪ್ಲ್ಯಾನ್ ಇದೆ. ಈ ಪೈಕಿ 19 ಹಾಗೂ 52 ರೂ.ಗಳ ಪ್ಲ್ಯಾನ್ ಮೂಲಕ ಗ್ರಾಹಕರು ಪ್ರತಿ ದಿನ 150ಎಂಬಿ ಡೇಟಾ ಪಡೆಯಬಹುದಾಗಿದೆ. ಇವುಗಳು ಅನುಕ್ರಮವಾಗಿ ಒಂದು ಹಾಗೂ ಏಳು ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ.
ಇನ್ನು ದೈನಿಕ 1.5 ಜಿಬಿ ಡೇಟಾ ನೀಡುವ ನಾಲ್ಕು ಪ್ಲ್ಯಾನ್‌ಗಳು ಚಾಲ್ತಿಯಲ್ಲಿದೆ. 149 ರೂ., 349 ರೂ., 399 ರೂ. ಹಾಗೂ 499 ರೂ.ಗಳ ಪ್ಲ್ಯಾನ್‌ಗಳು ಅನುಕ್ರಮವಾಗಿ 28 ದಿವಸ, 70 ದಿವಸ 84 ದಿವಸ ಹಾಗೂ 91 ದಿವಸಗಳ ವ್ಯಾಲಿಡಿಟಿ ಇರುತ್ತದೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ