ಚಿಕ್ಕಮಗಳೂರು, ಮಾ.31-ತರೀಕೆರೆ ತಾಲೂಕಿನ ಲಿಂಗದಹಳ್ಳಿ, ಗುಳ್ಳದ ಮನೆ, ತ್ಯಾಗದಬಾಗಿ ಗ್ರಾಮಗಳ ಸುತ್ತ ಕಾಡಾನೆಯೊಂದು ಅಡಕೆ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸಿದೆ.
ವಸಂತಕುಮಾರ್, ಮೂಡಲಗಿರಿಯಪ್ಪ ಹಾಗೂ ಸೋಮಶೇಖರಪ್ಪ ಎಂಬುವರಿಗೆ ಸೇರಿದ ತೋಟಗಳಿಗೆ ಹಾನಿ ಉಂಟು ಮಾಡಿದ್ದು, ಅಡಕೆ ಮರಗಳನ್ನು ನಾಶಪಡಿಸಿವೆ.
ಅಲ್ಲದೆ, ಕೊಳವೆ ಬಾವಿಗಳನ್ನು ನಾಶ ಮಾಡಿದ್ದು, ಹನಿ ನೀರಾವರಿಗೆ ಹಾಕಿದ ಪೈಪ್ಲೈನ್ಗಳನ್ನು ಕಿತ್ತುಹಾಕಿದ್ದು, ಬರಗಾಲದಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ಇದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಅರಣ್ಯ ಇಲಾಖೆಗೆ ರೈತರು ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಆನೆಯನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.