
ಶ್ರೀನಗರ, ಮಾ.30- ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿಗಳ ಉಪಟಳ ಮುಂದುವರಿದಿದ್ದು, ಅನಂತನಾಗ್ ಜಿಲ್ಲೆಯಲ್ಲಿ ಭಯೋತ್ಪಾದಕರು ವಿಶೇಷ ಪೆÇಲೀಸ್ ಅಧಿಕಾರಿ (ಎಸ್‍ಪಿಒ) ಒಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಈ ಘಟನೆಯಲ್ಲಿ ಅವರ ಪತ್ನಿಗೂ ಗಾಯಗಳಾಗಿವೆ.
ದಕ್ಷಿಣ ಕಾಶ್ಮೀರದ ಕಸ್ತೂ ಪ್ರದೇಶದಲ್ಲಿರುವ ಬಿಜ್‍ಬೆಹಾರದಲ್ಲಿನ ಎಸ್‍ಪಿಒ ಮುಷ್ತಾಕ್ ಅಹಮದ್ ಶೇಖ್ ಮನೆಗೆ ನಿನ್ನೆ ರಾತ್ರಿ ನುಗ್ಗಿದ ಉಗ್ರರು ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾದರು. ಪತಿಯ ರಕ್ಷಣೆಗೆ ಧಾವಿಸಿ ಪತ್ನಿ ಫರೀದಾ ಅವರಿಗೂ ಗಾಯಗಳಾಗಿವೆ. ಸನ್‍ಗಮ್ ಪ್ರದೇಶದ ಪೆÇಲೀಸ್ ಪೆÇೀಸ್ಟ್‍ನಲ್ಲಿ ಮುಷ್ತಾಕ್ ವಿಶೇಷ ಪೆÇಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಪೆÇಲೀಸರು ಉಗ್ರರಿಗಾಗಿ ಶೋಧ ಮುಂದುವರಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯೆ ಅಹಗಂ ಪ್ರದೇಶದಲ್ಲಿ ಸೇನಾ ವಾಹನದ ಮೇಲೆ ನಿನ್ನೆ ರಾತ್ರಿ ಉಗ್ರರು ದಾಳಿ ನಡೆಸಿದ್ದು, ಕೆಲವರಿಗೆ ಗಾಯಗಳಾಗಿವೆ.