ಬೇತ್ಲೆಹೇಮ್/ವ್ಯಾಟಿಕನ್/ನವದೆಹಲಿ, ಮಾ.30- ಶಾಂತಿಧೂತ, ಅವತಾರ ಪುರುಷ ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವನ್ನು ಇಂದು ಜಗತ್ತಿನಾದ್ಯಂತ ಗುಡ್‍ಫ್ರೈಡೆಯನ್ನಾಗಿ ಆಚರಿಸಲಾಗುತ್ತಿದೆ. ಇಸ್ರೇಲ್‍ನ ಬೇತ್ಲೆಹೇಮ್, ರೋಮ್‍ನ ವ್ಯಾಟಿಕನ್ ಸೇರಿದಂತೆ ಕ್ಯಾಥೋಲಿಕ್ ಕ್ರೈಸ್ತರ ಪ್ರಾಬಲ್ಯವಿರುವ ದೇಶಗಳ ಪ್ರಮುಖ ನಗರಗಳಲ್ಲಿ ಇಂದು ಗುಡ್ ಫ್ರೈಡೆ ಆಚರಿಸಲಾಯಿತು. ಇಂದು ವಿಶೇಷ ಪ್ರಾರ್ಥನಾ ಸಭೆಗಳು ಮತ್ತು ಏಸುವನ್ನು ಶಿಲುಬೆಗೇರಿಸಿದ ದೃಶ್ಯವನ್ನು ಬಿಂಬಿಸುವ ಮೆರವಣೆಗೆಗಳು ನಡೆದವು. ಭಾರತದ ವಿವಿಧ ರಾಜ್ಯಗಳು ಹಾಗೂ ಈಶಾನ್ಯ ಪಾಂತ್ರಗಳಲ್ಲೂ ಗುಡ್‍ಫ್ರೈಡೆಯನ್ನು ಆಚರಿಸಿ, ಶಾಂತಿ ಸಾರುವ ಮೆರವಣಿಗೆಯನ್ನು ನಡೆಸಲಾಯಿತು.